ಶಿವನ ಆರಾಧನೆಯಿಂದ ಬದುಕು ಹಸನು

17yaragatti1
ಯರಗಟ್ಟಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ದ್ವಾದಶ ಜ್ಯೋತಿರ್ಲಿಂಗ ದರ್ಶನ ಕಾರ್ಯಕ್ರಮವನ್ನು ರಾಜಯೋಗಿನಿ ಬ್ರಹ್ಮಕುಮಾರಿ ಅಂಬಿಕಾ ಅಕ್ಕನವರು ಶುಕ್ರವಾರ ಉದ್ಘಾಟಿಸಿದರು. ಜಯಶ್ರೀ ಅಕ್ಕನವರು, ಅಜಿತಕುಮಾರ ದೇಸಾಯಿ, ವಿನಯಕುಮಾರ ದೇಸಾಯಿ ಇತರರಿದ್ದರು.
Published on

ಯರಗಟ್ಟಿ: ಒಳ್ಳೆಯ ಆಲೋಚನೆ ಹಾಗೂ ನಿರಂತರ ಶಿವನ ಆರಾಧನೆಯಿಂದ ಬದುಕು ಹಸನಾಗುವ ಜತೆಗೆ ಭಗವಂತನ ಪ್ರೀತಿಗೆ ಪಾತ್ರರಾಗುತ್ತೇವೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬೆಳಗಾವಿ ಉಪವಲಯದ ಮುಖ್ಯಸ್ಥೆ ರಾಜಯೋಗಿನಿ ಬ್ರಹ್ಮಕುಮಾರಿ ಅಂಬಿಕಾ ಅಕ್ಕನವರು ಹೇಳಿದರು. ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ 87ನೇ ತ್ರಿಮೂರ್ತಿ ಶಿವ ಜಯಂತಿ, ಮಹಾಶಿವರಾತ್ರಿ ಮಹೋತ್ಸವ ಹಾಗೂ ದ್ವಾದಶ ಜ್ಯೋತಿರ್ಲಿಂಗ ದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಅತ್ಯಂತ ಪವಿತ್ರ ಹಬ್ಬವಾದ ಶಿವರಾತ್ರಿಯಂದು ಉಪವಾಸ ಮಾಡಿ ಜ್ಞಾನ ಹಾಗೂ ಭಜನೆ ಮೂಲಕ ಶಿವನನ್ನು ಆರಾಧಿಸಬೇಕು ಎಂದರು. ಬಿ.ಕೆ.ಜ್ಯೋತಿ ಅಕ್ಕನವರು ಮಾತನಾಡಿ, ಶಿವರಾತ್ರಿಯಂದು ಶಿವನನ್ನು ಆರಾಧಿಸುವ ಮೂಲಕ ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕು ಎಂದರು.

ಬಿ.ಕೆ.ಜಯಶ್ರೀ ಅಕ್ಕನವರು, ಜಿಪಂ ಮಾಜಿ ಸದಸ್ಯ ಅಜಿತಕುಮಾರ ದೇಸಾಯಿ, ತಾಪಂ ಮಾಜಿ ಅಧ್ಯಕ್ಷ ವಿಯಕುಮಾರ ದೇಸಾಯಿ, ಮೈತ್ರಾದೇವಿ ವಸದ, ಬಿ.ಬಿ.ಗೊರೋಶಿ, ಮಹಾಂತೇಶ ಜಕಾತಿ, ಡಾ. ಕೆ.ವಿ.ಪಾಟೀಲ, ಡಾ. ಚಿದಾನಂದ ಗಲಗಲಿ, ಮಲ್ಲಿಕಾರ್ಜುನ ಮಲಕನ್ನವರ, ಬಿ.ಡಿ.ಬಳಿಗಾರ, ಎಂ.ಎಂ.ಚೀಲದ, ವಿ.ಎಂ.ಮರಡಿ, ರಾಜೇಂದ್ರ ವಾಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net