ಶಿವದಾಸಿಮಯ್ಯ ಜಯಂತ್ಯುತ್ಸವ ಆ.13ಕ್ಕೆ -ಶಿವಸಿಂಪಿ ಸಮಾಜದ ಸಭೆಯಲ್ಲಿ ನಿರ್ಧಾರ

shiv.jpg
Published on

ದಾವಣಗೆರೆ: ನಗರದಲ್ಲಿ ಆಗಸ್ಟ್ 13ರಂದು ಕುಲಗುರು ಶ್ರೀ ಶಿವದಾಸಿಮಯ್ಯ ಜಯಂತ್ಯುತ್ಸವ, ಶಿವಸಿಂಪಿ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲು ಶನಿವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.

ಜಯದೇವ ವೃತ್ತದ ಶಿವಸಿಂಪಿ ಸಮಾಜದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಶಿವಸಿಂಪಿ ಸಮಾವೇಶದ ಲಾಂಛನ ಅನಾವರಣಗೊಳಿಸಿ ಮಾತನಾಡಿದ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಚಿಂದೋಡಿ ಚಂದ್ರಧರ್, ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಲು ಎಲ್ಲರೂ ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕು. ಸಮಾವೇಶದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ.75 ಮತ್ತು ಅಧಿಕ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. ವಿದ್ಯಾರ್ಥಿಗಳು ಜು.30ರ ಒಳಗಾಗಿ ಅಂಕಪಟ್ಟಿ, ಆಧಾರ್‌ಕಾರ್ಡ್ ನಕಲು ಪ್ರತಿಗಳನ್ನು ಸಮಾಜದ ಕಚೇರಿಗೆ ಸಲ್ಲಿಸಬೇಕು ಎಂದು ಅಧ್ಯಕ್ಷ ಬೂಸ್ನೂರು ಗುರುಬಸಪ್ಪ ಹೇಳಿದರು.

ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬೂಸ್ನೂರು, ಖಜಾಂಚಿ ಜಗದೀಶ್ ಬಾವಿಕಟ್ಟಿ, ಸಹ ಕಾರ್ಯದರ್ಶಿ ಜ್ಞಾನೇಶ್ವರ ಜವಳಿ, ಗೌರವಾಧ್ಯಕ್ಷ ಎಚ್.ಕೆ.ಹೇಮಣ್ಣ, ಕಣಕುಪ್ಪಿ ಮುರುಗೇಶಪ್ಪ, ಮಾಧ್ಯಮ ಕಾರ್ಯದರ್ಶಿ ಬಿ.ಎಂ.ಶಿವಕುಮಾರ್, ವಿರೂಪಾಕ್ಷ ಜವಳಿ, ಮಾಲ್ವಿ ಮಹಾದೇವಪ್ಪ, ಅನು ಕೊಟ್ರೇಶ್, ದೀಪಾ, ಮಲ್ಲಾಬಾದಿ ಚನ್ನಬಸಪ್ಪ, ಮಲ್ಲಿಕಾರ್ಜುನ ಕಬ್ಬೂರು, ಕೊಟ್ರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net