

ಚಿತ್ರದುರ್ಗ: ಕುಲಗುರು ಶಿವದಾಸಿಮಯ್ಯ ಜಯಂತಿ, ಲಿಂಗಾಯತ ಶಿವಶಿಂಪಿ ಸಮಾದ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಈ ಬಾರಿ ಅದ್ದೂರಿಯಾಗಿ ಆಚರಿಸೋಣ ಎಂದು ಸಮಾಜದ ಅಧ್ಯಕ್ಷ ಇ.ಎಸ್.ಜಯದೇವಮೂರ್ತಿ ತಿಳಿಸಿದರು.
ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಭಾನುವಾರ ನಡೆದ ಜಿಲ್ಲಾ ಲಿಂಗಾಯತ ಶಿವಶಿಂಪಿ ಸಮಾಜದ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಸಮಾಜ ಆರಂಭವಾಗಿ 25 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಅದನ್ನು ಕೂಡ ಇದೇ ವೇಳೆ ವಿಶೇಷವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದರು.
ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ. 85ರಷ್ಟು ಅಂಕಗಳಿಸಿದ ಜಿಲ್ಲೆಯಲ್ಲಿನ ನಮ್ಮ ಸಮಾಜದ ಪ್ರತಿಭಾವಂತರು, ಸಮಾಜಕ್ಕೆ ವಿವಿಧ ರೀತಿಯಲ್ಲಿ ಸೇವೆಗೈದ ಸಾಧಕರನ್ನು ವಯೋಮಿತಿ ಇಲ್ಲದೆ, ಸನ್ಮಾನಿಸಲಾಗುವುದು. ಅಗತ್ಯ ದಾಖಲೆಗಳೊಂದಿಗೆ ಸಂಘದ ಜಿಲ್ಲಾ ಕಚೇರಿಗೆ ಸಲ್ಲಿಸಬಹುದು ಎಂದು ಹೇಳಿದರು.
ಕಾರ್ಯದರ್ಶಿ ಇ.ಕೆ.ಮಲ್ಲಿಕಾರ್ಜುನ ಮಾತನಾಡಿ, ಕಾರ್ಯಕ್ರಮಕ್ಕೆ ಸಮಾಜದವರು ಅಗತ್ಯ ಸಹಕಾರ ನೀಡುವ ಮೂಲಕ ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಡಿ.ಬಿ.ಶಿವಹಾಲಪ್ಪ, ಎಸ್.ವೀರೇಶ್, ನಿರ್ಮಲಾ, ಅನಿತಾ ಇತರರಿದ್ದರು.