ಶಿವಗಂಗಾ ಗ್ರಾಪಂನಲ್ಲಿ ನರೇಗಾ ಕಡತ ಪರಿಶೀಲನೆ

zp ceo1---03
Published on

ಚಿತ್ರದುರ್ಗ:ಹೊಳಲ್ಕೆರೆ ತಾಲೂಕು ಶಿವಗಂಗಾ ಗ್ರಾಪಂಗೆ ಬುಧವಾರ ಸಂಜೆ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಅವರು ಹಠಾತ್ ಭೇಟಿ ನೀ ಡಿ ನರೇಗಾ ಯೋಜನೆಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿದರು. ನರೇಗಾ ಯೋಜನೆ ಮಾರ್ಗಸೂಚಿ ಅನ್ವಯ ಚೆಕ್‌ಲೀಸ್ಟ್ ಪ್ರಕಾರ ಕಡತ ನಿರ್ವಹಿಸಬೇಕು.
ಕಡತಗಳನ್ನು ಪ್ರತಿದಿನ ಪರಿಶೀಲಿಸಬೇಕು,ಒಂದು ವಾರದೊಳಗೆ ಕಡತಗಳನ್ನು ಸರಿಪಡಿಸದಿದ್ದರೆ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಅಧಿಕಾರಿಗಳನ್ನು ಎಚ್ಚರಿಸಿದರು. ಯಾವ ಕುಟುಂಬಕ್ಕೆ ಕಾರ್ಡ್ ಇಲ್ಲವೋ ಅಂತಹ ಕುಟುಂಬಗಳಿಗೆ ತುರ್ತಾಗಿ ಕಾರ್ಡ್‌ನೊಂದಿಗೆ ಉ ದ್ಯೋಗ ಕೊಡ ಬೇಕೆಂದರು. ಈ ನಿಟ್ಟಿನಲ್ಲಿ ಪಿಡಿಒ ಜವಾಬ್ದಾರಿಯಿಂದ ಕೆಲಸ ಮಾಡಬೇಕೆಂದರು.
ಜಿಲ್ಲೆಯ ಆರು ತಾಲೂಕುಗಳನ್ನು ಬರ ಪೀಡಿತವೆಂದು ಘೋಷಿಸಲಾಗಿದ್ದು,ಕೆಲಸ ನೀಡಿ ಹಾಗೂ ಸರಿಯಾದ ಸಮಯಕ್ಕೆ ಕೂಲಿ ಹಣ ಪಾವತಿಸ ಬೇಕೆಂದರು.ನರೇಗಾ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ನಿಯಮನುಸಾರ ಮತ್ತು ಗ್ರಾಪಂಗಳ ಜನಪ್ರತಿನಿಧಿಗಳ ಜತೆ ಸಮನ್ವಯ ದಿಂದ ಕೆಲಸ ನಿರ್ವಹಿಸುವಂತೆ ತಿಳಿಸಿದರು.
ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು,ಜಾನುವಾರುಗಳಿಗೆ ಮೇವಿನ ತೊಂದರೆ ಆಗಬಾರದೆಂದರು. ಗ್ರಾಮಗಳ ನೈ ರ್ಮಲ್ಯ ಹಾಗೂ ಕಸವಿಲೇವಾರಿ ವ್ಯವಸ್ಥೆ ಬಗ್ಗೆ ನಿಗಾ ವಹಿಸಬೇಕು. ಕುಡಿಯುವ ನೀರಿನ ಟ್ಯಾಂಕ್ ಮತ್ತು ಆರ್‌ಒ ಪ್ಲಾಂಟ್‌ಗಳ ಶುಚಿತ್ವದ ಬಗ್ಗೆ ಮಾಹಿತಿ ಪಡೆದರು. ಗ್ರಂಥಾಲಯ ಸಮಯಕ್ಕೆ ಸರಿಯಾಗಿ ತೆರೆದಿರಬೇಕೆಂದರು.
ಜಿಪಂ ಉಪ ಕಾರ‌್ಯದರ್ಶಿ ಕೆ.ತಿಮ್ಮಪ್ಪ,ಗ್ರಾಪಂ ಅಧ್ಯಕ್ಷೆ ವಾಣಿಗಿರೀಶ್,ಸದಸ್ಯರಾದ ಸತೀಶ್,ಚಂದ್ರಪ್ಪ,ಹೊಳಲ್ಕೆರೆ ತಾಪಂ ಇಒ ರವಿ ಕುಮಾರ್,ಪಿಡಿಒನವೀನ್,ಕಾರ‌್ಯದರ್ಶಿ ತಿಪ್ಪೇಸ್ವಾಮಿ ಮತ್ತಿತರ ಅಧಿಕಾರಿ,ಜನಪ್ರತಿನಿಧಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net