

ಚಾಮರಾಜನಗರ: ತಾಲೂಕಿನ ಬದನಗುಪ್ಪೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಶಿವಕುಮಾರ್, ಉಪಾಧ್ಯಕ್ಷರಾಗಿ ಕೆ.ಪಿ.ದೇವರಾಜ್ ಬುಧವಾರ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಶಿವಕುಮಾರ್, ಕೆ.ಪಿ.ದೇವರಾಜ್ ಹೊರತುಪಡಿಸಿ ಬೇರ್ಯಾರೂ ನಾಮಪತ್ರ ಸಲ್ಲಿಸಿದ ಕಾರಣ ಚುನಾವಣಾಧಿಕಾರಿ ಎಸ್.ನಾಗೇಶ್ ಅವಿರೋಧ ಆಯ್ಕೆ ೋಷಿಸಿದರು. ಅವಿರೋಧ ಆಯ್ಕೆ ಪ್ರಕ್ರಿಯೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಜಿ.ನಂಜುಂಡಸ್ವಾಮಿ, ಸುಶೀಲಾ, ಗುರುಪಾದ ಸ್ವಾಮಿ, ಬಿ.ಆರ್.ಶಿವಕುಮಾರ್, ಪ್ರಕಾಶ್, ಬಿ.ಗುರುಸಿದ್ದಯ್ಯ, ಚಿಕ್ಕದಾಸನಾಯಕ ಪಾಲ್ಗೊಂಡರು. ಮೇಲ್ವಿಚಾರಕರಾದ ಟಿ.ಮಂಜು, ಪ್ರಭಾರ ಸಿಇಒ ಮಹದೇವಯ್ಯ, ರಶ್ಮಿ ಭಾಗವಹಿಸಿದ್ದರು.
10 ಲಕ್ಷ ರೂ. ಅನುದಾನ ೋಷಣೆ: ಬದನಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 10 ಲಕ್ಷ ರೂ. ಅನುದಾನ ನೀಡುವುದಾಗಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರೂ ಆದ ಶಾಸಕ ಸಿ.ಪುಟ್ಟರಂಗಶೆಟ್ಟಿ ೋಷಣೆ ಮಾಡಿದರು. ಸಂಘದ ಕಚೇರಿಗೆ ಭೇಟಿ ನೀಡಿ ನೂತನ ಅಧ್ಯಕ್ಷ ಶಿವಕುಮಾರ್ ಮತ್ತು ಉಪಾಧ್ಯಕ್ಷ ಕೆ.ಪಿ.ದೇವರಾಜ್ ಅವರನ್ನು ಸನ್ಮಾನಿಸಿ ಸಂಘವನ್ನು ಪ್ರತಿಯತ್ತ ಕೊಂಡೊಯ್ಯಲು ಎಲ್ಲರೂ ಶ್ರಮಿಸೋಣ ಎಂದರು.
ಗ್ರಾಮದ ಮುಖಂಡರಾದ ಬಿ.ಪಿ.ನಾಗರಾಜಮೂರ್ತಿ, ಡೇರಿ ಅಧ್ಯಕ್ಷ ಶಿವ ಮಾದಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಕುಮಾರ್, ಸೊಸೈಟಿ ಮಾಜಿ ಅಧ್ಯಕ್ಷ ಮಹದೇವಪ್ಪ, ಕೃಷ್ಣನಾಯಕ, ಗೋಪಾಲನಾಯಕ, ಮಹೇಶ್, ರಾಜಶೇಖರ್, ಮಹೇಶ್ ಆಚಾರ್, ಕಾಳಯ್ಯ, ಸಂಘದ ವ್ಯಾಪ್ತಿಯ ಗ್ರಾಮಗಳಾದ ಮೇಲಾಜಿಪುರ, ಪಣ್ಯದಹುಂಡಿ, ಮುತ್ತಿಗೆ ಗ್ರಾಮಸ್ಥರು ಇದ್ದರು.