ಶಿವಕುಮಾರ ಶ್ರೀಗಳ 118ನೇ ಜಯಂತಿ

1 mlv 1
Published on

 ಮಳವಳ್ಳಿ: ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮಂಗಳವಾರ ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರ 118ನೇ ಜಯಂತಿ ಅಂಗವಾಗಿ ಅನ್ನಸಂತರ್ಪಣೆ ಹಾಗೂ ಭಾವಚಿತ್ರಕ್ಕೆ ವಿಶೇಷ ಪೂಜಾ ಕೈಂಕರ್ಯಗಳನ್ನು ಆಚರಿಸಲಾಯಿತು.

ಪಟ್ಟಣದ ಸಾರಿಗೆ ಬಸ್ ನಿಲ್ದಾಣದ ಮುಂಭಾಗ ಸರ್ವ ಸಮುದಾಯ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆದಾಡುವ ದೇವರೆಂದು ಸಮಾಜದಲ್ಲಿ ಜಾತ್ಯತೀತವಾಗಿ ಭಕ್ತ ಸಮೂಹವನ್ನು ಹೊಂದಿರುವ ಲಿಂಗೈಕ್ಯ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜನ್ಮ ವಧರ್ಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಬಸವ ಕೇಂದ್ರದ ತಾಲೂಕು ಅಧ್ಯಕ್ಷ ತೊಟ್ಟಿಮನೆ ಚನ್ನಪ್ಪ ಮಾತನಾಡಿ, 12ನೇ ಶತಮಾನದ ಬಸವಣ್ಣನ ಸಮಾನತೆಯ ಹಾಗೂ ಸನ್ಮಾರ್ಗದ ಸಂದೇಶವನ್ನು ಪ್ರಸ್ತುತ ಪೀಳಿಗೆಗೆ ನೀಡಿದವರು ಶ್ರೀ ಶಿವಕುಮಾರ ಸ್ವಾಮೀಜಿ. ಶ್ರೀಗಳ ತತ್ವಾದರ್ಶಗಳನ್ನು ಎಲ್ಲ ವರ್ಗದ ಯುವ ಸಮೂಹ ಪಾಕಲಿಸಿಕೊಂಡಾಗ ಮಾತ್ರ ಬದುಕಿಗೊಂದು ಸಾರ್ಥಕತೆ ದೊರೆಯಲು ಸಾಧ್ಯವೆಂದು ತಿಳಿಸಿದರು.

ಇದೇ ವೇಳೆ ನೆರೆದ ನೂರಾರು ಜನರಿಗೆ ಸಿಹಿ ವಿತರಣೆ ಮಾಡುಲಾಯಿತು. ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಕುಂದೂರು ಮೂರ್ತಿ, ನಿರ್ದೇಶಕರಾದ ತೆಂಕಳ್ಳಿ ಮಹೇಶ್, ಗೌಡಗೆರೆ ಕುಮಾರ, ಹಲದಾಸಹಳ್ಳಿ ತಾಂಡವಮೂರ್ತಿ, ಆರ್.ಬಿ.ಹಳ್ಳಿ ನಂದೀಶ್, ವೀರಶೈವ ಯುವ ಬಳಗದ ಅಧ್ಯಕ್ಷ ಎಚ್.ಸಿ.ಮಹೇಶ, ಗ್ರಾಪಂ ಸದಸ್ಯ ಕ್ಯಾತನಹಳ್ಳಿ ಅಶೋಕ್, ಮುಖಂಡರಾದ ಕುಂದೂರು ಪ್ರಕಾಶ್, ಗಜೇಂದ್ರ, ರಮೇಶ್, ಮಲ್ಲೇಶ್, ಪರಶಿವಮೂರ್ತಿ, ಎಚ್.ಬಿ.ಶಿವಸ್ವಾಮಿ, ಸಾಲುಮರ ನಾಗರಾಜು ಸೇರಿದಂತೆ ಇತರರಿದ್ದರು.

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಆಚರಣೆ

ಪಟ್ಟಣದ ಎನ್.ಇ.ಎಸ್.ಬಡಾವಣೆ ಬಸವೇಶ್ವರ ವೃತ್ತ, ಅನಂತ್ ರಾಮ್ ವೃತ್ತ, ತಾಲೂಕಿನ ರಾಗಿಬೊಮ್ಮನಹಳ್ಳಿ, ಕನ್ನಳ್ಳಿ, ನಾರಾಯಣಪುರ, ಡಿ.ಹಲಸಹಳ್ಳಿ, ಬೆಳಕವಾಡಿ, ಪೂರಿಗಾಲಿ, ಬಿ.ಜಿ.ಪುರ, ನೆಲ್ಲಿಗೆರೆ, ಹಂಗ್ರಾಪುರ, ವೀರಾಜಿಪುರ, ಚಿಕ್ಕಮುಲಗೂಡು, ದುಗ್ಗನಹಳ್ಳಿ, ಕಿರುಗಾವಲು, ಹಲಗೂರು, ಗ್ರಾಮದೇವತೆ ಪುರ ಸೇರಿದಂತೆ ಬಹುತೇಕ ಗ್ರಾಮದಲ್ಲಿ ಶ್ರೀಗಳ ಭಾವಚಿತ್ರ ಮೆರವಣಿಗೆ, ಅನ್ನಸಂರ್ತಣೆ ಕಾರ್ಯಕ್ರಮಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net