ಶಿವ ಶಿವ ಎಂದರೆ ಭಯವಿಲ್ಲ….

SHIVARATRI
Published on


ಯಾದಗಿರಿ: ಜಿಲ್ಲಾದ್ಯಂತ ಶನಿವಾರ ಮಹಾಶಿವರಾತ್ರಿ ಹಬ್ಬವನ್ನು ಭಕ್ತರು ಸಂಭ್ರಮ ಹಾಗೂ ಸಡಗರದಿಂದ ಆಚರಣೆ ಮಾಡಿದರು. ಜಿಲ್ಲೆಯಲ್ಲಿನ ಶಿವನ ದೇವಾಲಯಗಳಲ್ಲಿ ಶಿವನ ಆರಾಧನೆ, ಮಂತ್ರ, ಬಿಲ್ವಾರ್ಚನೆಯನ್ನು ಭಕ್ತರು ಶ್ರದ್ಧಾ-ಭಕ್ತಿಯಿಂದ ನೆರವೇರಿಸಿದರು.

ಬೆಳಗ್ಗೆಯಿಂದಲೇ ನಗರದ ಅಮೃತೇಶ್ವರ ದೇವಸ್ಥಾನ, ಆತ್ಮಲಿಂಗೇಶ್ವರ ದೇವಸ್ಥಾನ ಹಾಗೂ ಭತರ್ೇಶ್ವರ ದೇವಸ್ಥಾನದಲ್ಲಿ ಭಕ್ತರು ಶಿವನಿಗೆ ಪ್ರಿಯವಾದ ಬಿಲ್ವಪತ್ರೆಗಳನ್ನು ಅಪರ್ಿಸಿ ಪುನೀತರಾದರು. ಗುರುಮಠಕಲ್ ತಾಲೂಕಿನ ಈಡ್ಲೂರು ಗ್ರಾಮದ ಐತಿಹಾಸಿಕ ಶ್ರೀ ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ನಿಮಿತ್ತ ವಿಶೇಷ ಪೂಜೆ ನಡೆಯಿತು. ಅಲ್ಲದೆ ತಾಲೂಕಿನ ಚಿಂತನಳ್ಳಿಯ ಗವಿ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ಅಂಸಖ್ಯ ಭಕ್ತರು ತೆರಳಿ ಸಿದ್ದಲಿಂಗೇಶ್ವರರ ದರ್ಶನ ಪಡೆದುಕೊಂಡರು. ಉಪವಾಸ ಮಾಡಿ ಶಿವನನ್ನು ಆರಾಧನೆ ಮಾಡಿ ಒಲಿಸಿಕೊಳ್ಳುವ ಭಕ್ತರ ಪರಿ ಎಲ್ಲೆಡೆ ಕಂಡುಬಂತು. ಹಣ್ಣಿನ ರಸ, -ಲ-ಆಹಾರಗಳನ್ನಷ್ಟೇ ಸೇವಿಸಿ ರಾತ್ರಿಯಿಡೀ ಜಾಗರಣೆ ಮಾಡಿ ಶಿವನಿಗೆ ಅಭಿಷೇಕ ಮಾಡಿ ಭಕ್ತರು ಧನ್ಯರಾದರು.

ಶಿವರಾತ್ರಿ ಹಿನ್ನೆಲೆಯಲ್ಲಿ ತಾಲೂಕಿನ ಹತ್ತಿಕುಣಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಜಾತ್ರೆ ಅದ್ಧೂರಿಯಾಗಿ ಜರುಗಿತು. ಬೆಳಗ್ಗೆಯಿಂದಲೇ ನೂರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ನಂತರ 11 ಗಂಟೆಗೆ ಮುತ್ತೈದೆಯರು ಕಳಸ ತೆಗೆದುಕೊಂಡು ಬಂದ ನಂತರ ವೀರಯ್ಯಸ್ವಾಮಿ ಹಿರೇಮಠ ನೇತೃತ್ವದಲ್ಲಿ ಧಾಮರ್ಿಕ ವಿ ವಿಧಾನಗಳಂತೆ ದೇವರ ಮೂತರ್ಿಯನ್ನು ಪಲ್ಲಕ್ಕಿಯಲ್ಲಿಟ್ಟುಕೊಂಡು ವಿವಿಧ ಸಂಗೀತ ವಾದ್ಯ ಮೇಳಗಳೊಂದಿಗೆ ಗ್ರಾಮದ ಹೊರ ವಲಯದ ಗಂಗಾ ಸ್ನಾನಕ್ಕೆ ಮೆರವಣಿಗೆ ಮೂಲಕ ತೆರಳಿದರು.

ಮೆರವಣಿಗೆಯಲ್ಲಿ ನೂರಾರು ಯುವಕರು ಕೇಸರಿಧ್ವಜ ಕೈಯಲ್ಲಿ ಹಿಡಿದುಕೊಂಡು ಶ್ರೀ ರಾಮಲಿಂಗೇಶ್ವರ ಮಹಾರಾಜ್ ಕೀ ಜೈ ಎಂಬ ಘೋಷಣೆ ಕೂಗುತ್ತಾ ಪಟಾಕಿ ಸಿಡಿಸಿ ಸಂಭ್ರಮದಿಂದ ಭಾಗವಹಿಸಿದರು.

ಗಂಗಾ ಸ್ನಾನದ ಬಳಿಕ ಪಲ್ಲಕ್ಕಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮದ್ಯಾಹ್ನ 3 ಗಂಟೆಗೆ ದೇವಸ್ಥಾನ ತಲುಪಿತು, ಶ್ರೀಗಳು ಮೂತರ್ಿಯನ್ನು ಮೂಲಸ್ಥಳ ಶಿವಲಿಂಗದ ಮೇಲೆ ಇಟ್ಟು ಕತೃ ಗದ್ದುಗೆಗೆ ಹಾಗೂ ಕಾಲಭೈರವೇಶ್ವರ ಮೂತರ್ಿಗೆ ವಿಶೇಷ ರುದ್ರಾಭಿಷೇಕ ಮಾಡಿದರು. ರಾತ್ರಿ ದೇವಸ್ಥಾನದಲ್ಲಿ ಗ್ರಾಮದ ವಿವಿಧ ಭಜನಾ ತಂಡಗಳಿಂದ ಶಿವನಾಮ ಸ್ಮರಣೆ, ಭಜನೆ ಮಾಡಿ, ಭಕ್ತಿ ಭಾವ ಮೆರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net