ಶಿವ ಮಂದಿರದಲ್ಲಿ ಶಿವರಾತ್ರಿ ಉತ್ಸವ

Published on

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯ ಶಿವನಗರದ ಶ್ರೀ ಇಷ್ಟ ಸಿದ್ಧೇಶ್ವರ ದೇವಸ್ಥಾನವು ಭಕ್ತರ ಇಷ್ಟಾರ್ಥ ಸಿದ್ಧಿಗೆ ಖ್ಯಾತವಾಗಿದೆ. ಮಲೆನಾಡ ಶೈಲಿಯಲ್ಲಿ ನಿರ್ವಿುತವಾದ ಈ ಶಿವ ಮಂದಿರದಲ್ಲಿ ಫೆ. 26ರಂದು ಶಿವರಾತ್ರಿ ಉತ್ಸವ ಆಯೋಜಿಸಲಾಗಿದ್ದು, ವಿವಿಧ ಧಾರ್ವಿುಕ ಕಾರ್ಯಕ್ರಮಗಳು ಜರುಗಲಿದೆ. ಭಕ್ತರಿಗೆ ಬೆಳಗ್ಗೆ 6.30 ರಿಂದ ರಾತ್ರಿ 10 ಗಂಟೆಯವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net