

ಚಿಕ್ಕಮಗಳೂರು: ಪರಮಾತ್ಮನ ವಿಗ್ರಹ ಹಾಗೂ ಶಿಲ್ಪಕಲೆಗಳ ಕೆತ್ತನೆಯಲ್ಲಿ ವಿಶ್ವಕರ್ಮರ ಕೊಡುಗೆ ಅಪಾರ. ಬಂಡೆ ಹಾಗೂ ಮರಗಳಿಂದ ಆರಾಧಿಸುವ ದೈವ ಮೂರ್ತಿಗಳನ್ನು ಕೆತ್ತಲ್ಪಟ್ಟಿರುವ ಹಿನ್ನೆಲೆಯಲ್ಲಿ ವಿಶ್ವಕರ್ಮರಿಗೆ ರಾಷ್ಟçದಲ್ಲಿ ವಿಶೇಷ ಗೌರವವಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ನಗರದ ಶ್ರೀಲೇಖಾ ಟಾಕೀಸ್ ಸಮೀಪದ ವಿಶ್ವಕರ್ಮ ಸಮುದಾಯ ಭವನದಲ್ಲಿ ಜಿಲ್ಲಾ ವಿಶ್ವಬ್ರಾಹ್ಮಣ ಸಮಾಜ ಸೇವಾಸಭಾದಿಂದ ಏರ್ಪಡಿಸಿದ್ದ ವೈಶ್ವಕರ್ಮಣ ಮಹಾಯಜ್ಞ, ಸಾಮೂಹಿಕ ಉಪನಯನ ಮತ್ತು ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಮಾನ್ಯ ಬಂಡೆಯನ್ನು ನೂರಾರು ಉಳಿ ಏಟಿನಿಂದ ಕೆತ್ತಿ ಸುಂದರ ರೂಪಕೊಟ್ಟು ದೈವಜ್ಞಾನ ತುಂಬುವ ಕೈಚಳಕ ವಿಶ್ವಕರ್ಮರಲ್ಲಿದೆ. ಆ ಕೆತ್ತಲ್ಪಟ್ಟಿರುವ ನೂರಾರು ಮೂರ್ತಿಗಳನ್ನು ಮಠ-ಮಂದಿರ, ಮನೆಗಳಲ್ಲಿ ಪ್ರತಿಷ್ಟಾಪಿಸಿ ಕೈಮುಗಿಯುವ ಸಂಸ್ಕೃತಿಗೆ ಪ್ರೇರಿತರು. ಹೀಗಾಗಿ ದೈವದ ಸೇವೆಯಲ್ಲಿ ವಿಶ್ವಕರ್ಮರ ಕೊಡುಗೆ ಶ್ಲಾಘನೀಯ ಎಂದರು.
ಅಮರಶಿಲ್ಪಿ ಜಕಣಾಚಾರಿಯ ಬೇಲೂರು, ಹಳೇಬೀಡು ಕೆತ್ತನೆ ನೋಡಲು ಎರಡು ಕಣ್ಣುಗಳು ಸಾಲದು. ಈ ವಿಶಿಷ್ಟ ಶಿಲ್ಪಕಲೆ ಸವಿಯಲು ಪ್ರಪಂಚದ ವಿವಿಧ ಮೂಲೆಗಳಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ. ಅದರಂತೆ ವಿಜಯ ನಗರ ಸಾಮ್ರಾಜ್ಯ ಹಾಗೂ ಪುರಾತನ ದೇವಾಲಯಗಳಲ್ಲಿ ಯಾವುದೇ ತಾಂತ್ರಿಕತೆ ಇಲ್ಲದ ವೇಳೆಯಲ್ಲಿ ಕೇವಲ ಮೆದುಳಿನ ಶಕ್ತಿಯಿಂದಲೇ ಭವ್ಯ ರೂಪು ನೀಡಿದ್ದಾರೆ ಎಂದರು.
ಪ್ರಸ್ತುತ ಶ್ರೀಲೇಖಾ ಟಾಕೀಸ್ ಸಮೀಪ ಸಂಘದ ಕಟ್ಟಡವು ಅರ್ಧಬರ್ಧ ಸ್ಥಿತಿಯಲ್ಲಿದೆ. ಈ ಭವನದ ಅಭಿವೃದ್ದಿಗೆ ನಗರಸಭೆ ಆಡಳಿತದಲ್ಲಿ ಅನುದಾನವು ಕಾಯ್ದಿರಿಸಿದ್ದು, ಸಧ್ಯದಲ್ಲೇ ಅನುದಾನ ಬಿಡುಗಡೆ ಗೊಳಿಸಿ, ಮುಂದಿನ ವಾರ್ಷಿಕೋತ್ಸವ ಕಾರ್ಯಕ್ರಮದ ವೇಳೆಗೆ ಕಟ್ಟಡದ ಸಂಪೂರ್ಣ ಕಾಮಗಾರಿ ಪೂರೈಸಿ ಸಮಾಜಕ್ಕೆ ಅರ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಚನ್ನಗಿರಿಯ ಸಾವಿತ್ರಿ ಪೀಠದ ಶ್ರೀ ಶಂಕರಾತ್ಮನAದ ಸರಸ್ವತಿ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಎಳೆವಯಸ್ಸಿನಿಂದಲೇ ಮಕ್ಕಳಿಗೆ ಸನಾತನ ಸಂಸ್ಕೃತಿಯನ್ನು ಪಾಲಕರು ಬಿತ್ತಿದರೆ, ಭವಿಷ್ಯದಲ್ಲಿ ಹಿಂದೂ ಪರಂಪರೆ, ಸನಾತನ ಧರ್ಮವನ್ನು ಉಳಿಸಿ ಬೆಳೆಸಲು ಸಾಧ್ಯ ಎಂದು ಕರೆ ನೀಡಿದರು.
ವಿಶ್ವಕರ್ಮ ಸಮುದಾಯದಲ್ಲಿ ಹಲವಾರು ಉಪÀಜಾತಿಗಳಿವೆ. ಎಲ್ಲವೂ ಕೂಡಾ ವಿಶ್ವಕರ್ಮ ಜನಾಂಗದ ಭಾಗವಾಗಿದೆ. ಈ ವೈಶ್ವಕರ್ಮಣ ಯಜ್ಞವು ಲೋಕಕಲ್ಯಾಣಾರ್ಥ ಹಾಗೂ ಜನತೆಯಲ್ಲಿ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಜರುಗಿಸಲಾಗಿದೆ ಎಂದು ತಿಳಿಸಿದರು.
ಜಿಪಂ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ, ಸಣ್ಣ ಸಮಾಜಗಳಲ್ಲಿ ಕಾಳೆಯುವ ಸಂಸ್ಕೃತಿಯಿದೆ. ಹೀಗಾಗಿ ಸಮಾಜವನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಮುನ್ನೆಡೆದರೆ ಆರ್ಥಿಕ ಮತ್ತು ಸದೃಢವಾಗಿ ಸಮಾಜವು ಬೆಳವಣಿಗೆ ಹೊಂದಲು ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಭಾ ಅಧ್ಯಕ್ಷ ಎಚ್.ಆರ್.ಉಮಾಶಂಕರ್, ವಿಶ್ವಕರ್ಮ ಸಮಾಜ ಸ್ಥಾಪನೆಗೆ ಹಲವಾರು ಹಿರಿಯರ ಕೊಡುಗೆಯಿದೆ. ಜೊತೆಗೆ ಸಮಾಜದ ಏಳಿಗೆಗೆ ಶಕ್ತಿಮೀರಿ ಕೆಲಸವು ಆಗಿವೆ. ಆದರೆ ಅನೇಕ ವರ್ಷಗಳು ಕಳೆದರೂ ಭವನ ಪೂರ್ಣ ಗೊಳ್ಳದಿರುವುದು ಬೇಸರ ತಂದಿದೆ. ಈ ಬಗ್ಗೆ ಶಾಸಕರು ಶೀಘ್ರವೇ ಗಮನಹರಿಸಿ ಭವನ ಪೂರ್ಣಕ್ಕೆ ಅನುದಾನ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಮುಂಜಾನೆಯಿAದ ನೂರಾರು ಭಕ್ತಾಧಿಗಳ ಸಮ್ಮುಖದಲ್ಲಿ ಯಜ್ಞ ಪೂರ್ಣಗೊಂಡಿತು. ನಂತರ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸುಮಾರು ೨೦ ವಟುಗಳಿಗೆ ಸಾಮೂಹಿಕ ಉಪ ನಯನ ಜರುಗಿಸಲಾಯಿತು.
ಕಾರ್ಯಕ್ರಮದಲ್ಲಿ ವಿ.ಬ್ರಾ.ಸ.ಸೇವಾ ಸಭಾದ ಗೌರವಾಧ್ಯಕ್ಷ ಚೇತನ್‌ಕುಮಾರ್, ನಿಕಟಪೂರ್ವ ಅಧ್ಯಕ್ಷ ಎಂ.ಜೆ.ಮಹೇಶ್‌ಆಚಾರ್, ವಿಶ್ವಕರ್ಮ ಸಹಕಾರ ಸಂಘದ ಅಧ್ಯಕ್ಷ ಬಿ.ಪಿ.ರತೀಶ್, ಜಿಲ್ಲಾ ವಿಶ್ವಕರ್ಮ ಮಹಿಳಾ ಸಂಘದ ಅಧ್ಯಕ್ಷೆ ಮಂಜುಳಾ ಭೀಮಾಚಾರ್, ಸೇವಾರತ್ನ ಪುರಸ್ಕೃತ ಕೃಷ್ಣಮೂರ್ತಿ, ವಿ.ಸ.ಅ. ನಿಗಮದ ಸದಸ್ಯ ಚಿದಂಬರ್, ಕೆನರಾ ಬ್ಯಾಂಕ್ ಮೌಲ್ಯಮಾಪಕರ ಸಂಘದ ರಾಜ್ಯಾಧ್ಯಕ್ಷ ರುದ್ರಯ್ಯ ಆಚಾರ್, ಸಮಾಜದ ಮುಖಂಡರಾದ ದಿವಾಕರ, ಬಿ.ಚಂದ್ರಶೇಖರ್, ಮಹೇಂದ್ರಚಾರ್, ನವೀನ್‌ಕುಮಾರ್ ಆಚಾರ್ಯ, ತೀರ್ಥಾಚಾರ್ ಮತ್ತಿತರರಿದ್ದರು.