ಶಿಲುಬೆ ಸಂಸ್ಥಾಪನೆ ವರ್ಷಾಚರಣೆ

Meeragang
Published on

ಬೀದರ್: ತಾಲೂಕಿನ ಮೀರಾಗಂಜ್ ಗ್ರಾಮದ ಮೆಥೋಡಿಸ್ಟ್ ಚರ್ಚ್ ಆವರಣದಲ್ಲಿ ಶಿಲುಬೆ ಸಂಸ್ಥಾಪನೆ 2ನೇ ವರ್ಷಾಚರಣೆ ಕಾರ್ಯಕ್ರಮ ಮಂಗಳವಾರ ಮೆಥೋಡಿಸ್ಟ್ ಚರ್ಚ್ ಕಮಿಟಿಯಿಂದ ಅದ್ದೂರಿಯಾಗಿ ಆಚರಿಸಲಾಯಿತು.

ಸೇಂಟ್ ಪೌಲ್ ಮೆಥೋಡಿಸ್ಟ್ ಚರ್ಚ್ ಜಿಲ್ಲಾ ಮೇಲ್ವಿಚಾರಕ ಎಂ.ಪಿ.ಜಯಪೌಲ್ ಅವರು ಪ್ರಾರ್ಥನೆ ಮಾಡುವ ಮೂಲಕ ಹಾಗೂ ಕೇಕ್ ಕತ್ತರಿಸಿ ವರ್ಷಾಚರಣೆ ಉದ್ಘಾಟಿಸಿ ಸಂದೇಶ ನೀಡಿ, ಶಿಲುಬೆ ನಮ್ಮೆಲ್ಲರ ಶಕ್ತಿ. ಯೇಸು ಕ್ರಿಸ್ತ ಈ ಲೋಕದಲ್ಲಿ ಜೀವಿಸಿ ಕೊನೆಯ ಸಂದರ್ಭದಲ್ಲಿ ಮಾನವ ಕುಲದ ಪಾಪ ಕಳೆಯಲು ಶಿಲುಬೆಯ ಮೇಲೆ ತಮ್ಮ ಜೀವವನ್ನು ತ್ಯಾಗ, ಬಲಿದಾನ ಮಾಡಿದ್ದಾರೆ. ಮರಣವನ್ನು ಗೆದ್ದು ಬಂದ ಯೇಸು ಕ್ರಿಸ್ತ ನಮ್ಮೆಲ್ಲರಿಗೂ ಆಶೀರ್ವಾದ ದಯಪಾಲಿಸಿದ್ದಾರೆ ಎಂದರು.

ಚರ್ಚ್ ಸಮಿತಿ ಸದಸ್ಯ ಜೈಶೀಲ ಮೇತ್ರೆ ಮಾತನಾಡಿದರು. ಚರ್ಚ್ ಅಧ್ಯಕ್ಷ ರೆವರೆಂಡ್ ವಿಜಯಕುಮಾರ ಪಿ., ಆಶೀರ್ವಾದಮ್ ಜೇಮ್ಸ್, ರಮೇಶ ಖಂಡೆ, ಪಿ.ಸಿ.ಎಂ. ಮಾರ್ಟಿನ್, ಎನ್. ಸಾಲಮೋನ್ ಭಂಡೆ, ಜೀವನ ಮೇತ್ರೆ, ಎಂ.ಜೆ. ಸ್ವಾಮಿದಾಸ, ರಮೇಶ ಭಂಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net