ಶಿಲುಬೆ ತೆರವಿಗೆ ಒತ್ತಾಯಿಸಿ ಮನವಿ

PHOTO-2
Published on

ಚಿತ್ರದುರ್ಗ : ಇಂಗಳದಾಳ್ ಮತ್ತು ಲಂಬಾಣಿಹಟ್ಟಿ ಗ್ರಾಮದ ನಡುವಿನ ಗುಡ್ಡದಲ್ಲಿ ಅನಧಿಕೃತವಾಗಿ ಶಿಲುಬೆ ನೆಟ್ಟಿರುವುದನ್ನು ತೆರವು ಗೊಳಿಸುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಮಾತೃಶಕ್ತಿ ಮತ್ತು ದುರ್ಗಾವಾಹಿನಿ ಕಾರ‌್ಯಕರ್ತರು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನೀ ಕೇರಿ ಹಾಗೂ ತಹ ಸೀಲ್ದಾರ್ ಜೆ.ಸಿ.ವೆಂಕಟೇಶಯ್ಯಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.

ಸರ್ಕಾರಿ ಜಾಗದಲ್ಲಿ ಶಿಲುಬೆ ನೆಟ್ಟು ಇಡೀ ಗುಡ್ಡ ಅತಿಕ್ರಮಣದ ಸಂಚು ನಡೆದಿದೆ. ಇದರ ವಿರುದ್ದ ಸ್ಥಳೀಯರು ಹಾಗೂ ಸಾರ್ವಜನಿ ಕರು ಅನೇಕ ಬಾರಿ ಮನವಿಗಳನ್ನು ನೀಡಿದ್ದರೂ ಜಿಲ್ಲಾ ಅಥವಾ ತಾಲೂಕು ಆಡಳಿತ ಗಮನ ಹರಿಸಿಲ್ಲ. ಸಂಬಂಧಿಸಿದ ಅಧಿಕಾರಿಗಳು ಶಿಲು ಬೆ ತೆರವಿಗೆ ಕ್ರಮ ವಹಿಸದೇ ಇದ್ದಲ್ಲಿ,ನಾವೇ ಅದನ್ನು ಕಿತ್ತು ಹಾಕುವುದಾಗಿ ಎಚ್ಚರಿಸಿದರು. ಬಿಂಧುಶ್ರೀ,ಕಾವ್ಯ,ಶ್ವೇತಾ,ಸುನಿತಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net