ಶಿಲಾಮಯ ಕಟ್ಟಡದ ಪಾದುಕಾ ಪೂಜೆ 20ರಂದು

14ANKOLA1
Published on

ಅಂಕೋಲಾ: ತಾಲೂಕಿನ ಶ್ರೀ ಕೋಗ್ರೆ ಬೊಮ್ಮಯ್ಯ ದೇವರ ನೂತನ ಶಿಲಾಮಯ ಕಟ್ಟಡದ ಪಾದುಕಾ ಪೂಜೆ ಜ. 20ರಂದು ನೆರವೇರಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಈ ಸಂಬಂಧ ದೇವಸ್ಥಾನ ನವೀಕರಣ ಸಮಿತಿ ಸದಸ್ಯರು ಗುರುವಾರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.

ಸಮಿತಿ ಅಧ್ಯಕ್ಷ ದೇವಾನಂದ ಬಿ. ಗಾಂವಕರ ಮಾತನಾಡಿ, 6 ಶತಮಾನಗಳಿಗಿಂತಲೂ ಪ್ರಾಚೀನ ಭವ್ಯ ಪರಂಪರೆ ಹೊಂದಿರುವ ಶ್ರೀ ದೇವರ ನೂತನ ಶಿಲಾಮಯ ದೇವಸ್ಥಾನ, ಪರಿವಾರ ದೇವರು ಹಾಗೂ ಇತರೇ ಅಭಿವೃದ್ಧಿ ಕಾರ್ಯಗಳಿಗೆ ಅಂದಾಜು 4 ಕೋಟಿ ರೂ. ವೆಚ್ಚದಲ್ಲಿ ನೀಲಿನಕ್ಷೆ ಸಿದ್ಧಗೊಂಡು ದೇವಸ್ಥಾನದ ಬುನಾದಿ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ. ಮುಂದಿನ ಕಾರ್ಯಗಳಿಗೆ ಜನ ಪ್ರತಿನಿಧಿಗಳು, ಭಕ್ತಾದಿಗಳು ಸರ್ವ ರೀತಿಯ ಸಹಕಾರ ನೀಡಬೇಕು ಎಂದು ಕೋರಿದರು.

ಜ. 20ರಂದು ನಡೆಯಲಿರುವ ಧಾರ್ವಿುಕ ಕಾರ್ಯಕ್ರಮದ ನಂತರ ಶಾಸಕಿ ರೂಪಾಲಿ ನಾಯ್ಕ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಮಂತ್ರಿ ಶಿವರಾಮ ಹೆಬ್ಬಾರ, ವಾಸ್ತುತಜ್ಞ ಗುಂಡಿಬೈಲ್ ಸುಬ್ರಹ್ಮಣ್ಯ ಭಟ್, ಮಾಜಿ ಶಾಸಕ ಸತೀಶ ಸೈಲ್, ಪ್ರಮುಖರಾದ ರಮಾನಂದ ನಾಯಕ, ಅರುಣ ಕಲ್ಲಗುಜ್ಜಿಕರ, ಮಯೂರ ಆರ್.ನಾಯಕ, ಹನುಮಂತ ಬೊಮ್ಮು ಗೌಡ, ನಾಗರಾಜ ತಂತ್ರಿ, ಗಣಪತಿ ಪಾಲನಕರ ಮತ್ತಿತರರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

ಸಮಿತಿ ಕಾರ್ಯದರ್ಶಿ ಗುರುಪ್ರಸಾದ ಎನ್.ನಾಯಕ, ಸಹಕಾರ್ಯದರ್ಶಿ ನಾರಾಯಣ ವಿ. ನಾಯಕ ಶೀಳ್ಯ, ಕೋಶಾಧ್ಯಕ್ಷ ವೆಂಕಟರಾಯ ಎನ್.ನಾಯಕ ಪದಾಧಿಕಾರಿಗಳಾದ ಮಾಣೇಶ್ವರ ನಾಯಕ, ಹಮ್ಮಣ್ಣ ಬಿ.ನಾಯಕ, ನಾರಾಯಣ ಎಂ.ನಾಯಕ, ಗಣಪತಿ ಆರ್. ನಾಯಕ, ಗಣಪತಿ ನಾಯಕ, ವೆಂಕಟರಮಣ ಗೌಡ, ಮೋಹನ ಗೌಡ, ಜಗದೀಶ ಆಗೇರ, ದುರ್ಗಪ್ಪ ಮಡಿವಾಳ, ಬೊಮ್ಮಯ್ಯ ನಾಯಕ, ಬೀರಣ್ಣ ನಾಯಕ ಶೀಳ್ಯೆ, ರಾಜೇಶ ನಾಯಕ, ಸಚಿನ ಗುನಗಾ ಇತರರು ಇದ್ದರು.

ದೇಗುಲದ ರಸ್ತೆ ಅಭಿವೃದ್ಧಿಗೆ ಶಾಸಕರ ನಿಧಿಯಿಂದ 10 ಲಕ್ಷ ರೂ. ಮತ್ತು ಜಿ.ಪಂ.ನಿಂದ 2.50 ಲಕ್ಷ ರೂ., 2 ಶೌಚಗೃಹ ನಿರ್ವಣಕ್ಕೆ 6ಲಕ್ಷ ರೂ., ತಾಪಂ ನಿಂದ ರಸ್ತೆ ಗಟಾರ ನಿರ್ವಣಕ್ಕೆ 1.30 ಲಕ್ಷರೂ. ಮತ್ತು ಬಾವಿ ರಿಪೇರಿಗೆ 1 ಲಕ್ಷ ರೂ., ಶೆಟಗೇರಿ ಗ್ರಾಪಂ ನಿಂದ ಕೊಳವೆ ಬಾವಿಗೆ 85 ಸಾವಿರ ರೂ. ಹಾಗೂ ಸ್ಥಳೀಯರು ಸೇರಿದಂತೆ ವಿವಿಧೆಡೆಯ ಭಕ್ತರು ಈಗಾಗಲೇ ಸುಮಾರು 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಮುಜರಾಯಿ ಇಲಾಖೆಯಿಂದ 1 ಕೋಟಿ ರೂ. ಅನುದಾನಕ್ಕೆ ನೀಡುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಗಿದೆ. | ದೇವಾನಂದ ಬಿ. ಗಾಂವಕರ, ಅಧ್ಯಕ್ಷರು ದೇಗುಲ ನವೀಕರಣ ಸಮಿತಿ ಕೋಗ್ರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net