

ಕಾಗವಾಡ: ಅಥಣಿ ಶುಗರ್ಸ್ ಉದ್ಯೋಗ ಸಮೂಹದ ಸಂಸ್ಥಾಪಕ ಅಧ್ಯಕ್ಷ ಶ್ರೀಮಂತ ಪಾಟೀಲ ಅವರ ಜನ್ಮದಿನದ ಪ್ರಯುಕ್ತ ಚಂದ್ರಪ್ಪವಾಡಿ ಗ್ರಾಮದ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಶಿವನೇರಿ ಕಿತಾಬ್ ಭವ್ಯ ಎತ್ತಿನ ಗಾಡಿ ಶರ್ಯತ್ತಿನಲ್ಲಿ ಶಿರೂರ ಗ್ರಾಮದ ಬಾಳು ಹಜಾರೆ ಅವರ ಹೆಲಿಕ್ಯಾಪ್ಟರ್ ಖ್ಯಾತಿಯ ಬೈಜಾನ ಜೋಡೆತ್ತುಗಳು ಪ್ರಥಮ ಸ್ಥಾನ ಪಡೆದುಕೊಂಡವು.
ದಕ್ಷಿಣ ಭಾರತೀಯ ಸಕ್ಕರೆ ಸಂಸ್ಥೆಗಳ ಕರ್ನಾಟಕದ ಅಧ್ಯಕ್ಷ ಯೋಗೇಶ ಶ್ರೀಮಂತ ಪಾಟೀಲ ಅವರು ಗಣ್ಯರೊಂದಿಗೆ ಶರ್ಯತ್ತು ಉದ್ಘಾಟನೆ ನೆರವೇರಿಸಿದರು.
ಕಾರ್ಯಕ್ರಮದ ಉಸ್ತುವಾರಿ ದಾದಾ ಶಿಂಧೆ ಮಾತನಾಡಿ, ಶ್ರೀಮಂತ ಪಾಟೀಲ ಅವರ ಜನ್ಮದಿನದ ಪ್ರಯುಕ್ತ ಗಡಿ ಭಾಗದಲ್ಲಿ ಗ್ರಾಮೀಣ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುವ ಸಲುವಾಗಿ ಬೈಲ್ ಗಾಡಿ ಶರ್ಯತ್ತು ಆಯೋಜನೆ ಮಾಡಲಾಗಿದೆ. ಸಾಮಾಜಿಕ ಕಾರ್ಯಗಳಿಗೆ ಶ್ರೀಮಂತ ಪಾಟೀಲ ಅವರು ಎಲ್ಲ ರೀತಿಯ ಸಹಕಾರ ನೀಡಿದ್ದಾರೆ ಎಂದರು. ಮಹಾರಾಷ್ಟ್ರ ಕೇಸರಿ ಪೈಲ್ವಾನ್ ಚಂದ್ರಹಾರ ಪಾಟೀಲ ಮಾತನಾಡಿದರು.
ಶಿವಾನಂದ ಪಾಟೀಲ, ಅಭಯ ಅಕಿವಾಟೆ, ಬಸಗೌಡ ಪಾಟೀಲ, ಭಮ್ಮಣ್ಣ ಚೌಗುಲೆ, ನಿಂಗಪ್ಪ ಮಾಲಗಾವೆ, ಮುರಗೆಪ್ಪ ಮಗದುಮ, ತಮ್ಮಣ್ಣ ಪಾರಶೆಟ್ಟಿ, ರೇವಪ್ಪ ಪಾಟೀಲ, ಅಪ್ಪಾದಾದಾ ಹಜಾರೆ, ನಾನಾಸಾಬ ಅವತಾಡೆ, ಶಂಕರ ದೊಡ್ದನವರ, ಸಿದರಾಯ ಕಾಳೆಲಿ, ವಿಜಯ ಖನ್ನಿಕುಡೆ, ಸುಭಾಷ ಅಥಣಿ, ರವಿ ನಾಗ್ಗೋಳ, ಅಪ್ಪಾಸಾಬ ಮಳಮಳಸಿ, ಬೊಮ್ಮಣ್ಣ ಚೌಗುಲೆ ಇತರರು ಇದ್ದರು.