ಶಿರಾದಲ್ಲಿ 13 ವಿದ್ಯಾರ್ಥಿಗಳು ಅಸ್ವಸ್ಥ

Published on

ಶಿರಾ : ತಾಲೂಕು ಲಕ್ಕನಹಳ್ಳಿಯ ಸರ್ಕಾರಿ ಮೆಟ್ರಿಕ್​ ಪೂರ್ವ ಬಾಲಕರ ವಿದ್ಯಾರ್ಥಿನಿಲಯದಲ್ಲಿ ಮಂಗಳವಾರ ರಾತ್ರಿ ಚಿಕನ್​ ಸಾರು ಸೇವಿಸಿದ್ದ 13 ವಿದ್ಯಾರ್ಥಿಗಳು ಅಸ್ವಸ್ಥರಾಗಿ ಶಿರಾ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳು ಹಾಗೂ ಒಬ್ಬ ಶಿಕ ಮಂಗಳವಾರ ರಾತ್ರಿ ಚಿಕನ್​ ಸಾರು ಸೇವಿಸಿದ್ದರು. ಬುಧವಾರ ಬೆಳಗ್ಗೆ ವಿಶೇಷ ತರಗತಿಗೆಂದು ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳು ಹಾಗೂ ಶಿಕ ದೈಹಿಕ ಸುಸ್ತಿನಿಂದ ಬಳಲುತ್ತಿದ್ದರು. ಸ್ಥಳಿಯ ಆಸ್ಪತ್ರೆಗೆ ದಾಖಲಾಗಿ ಪ್ರಥಮ ಚಿಕಿತ್ಸೆ ಪಡೆದಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿರಾ ಸಾರ್ವಜನಿಕ ಆಸ್ಪತ್ರೆಗೆ ವಿದ್ಯಾರ್ಥಿಗಳನ್ನು ಆಂಬುಲೆನ್ಸ್​ ಮೂಲಕ ಕರೆತರಲಾಗಿದೆ. ಫುಡ್​ ಪಾಯ್ಸನ್​ ಹಿನ್ನೆಲೆಯಲ್ಲಿ ಅಸ್ವಸ್ಥರಾಗಿರುವ ಶಂಕೆ ವ್ಯಕ್ತವಾಗಿದೆ. ನಗರಸಭೆ ಅಧ್ಯ ಜಿಷನ್​ ಮೊಹಮ್ಮದ್​, ಜೆಡಿಎಸ್​ ಮುಖಂಡ ಉಗ್ರಪ್ಪ, ದಲಿತ ಮುಖಂಡ ರಾಜಸಿಂಹ, ಶಿಣ ಇಲಾಖೆಯ ಬಿಆರ್​ಸಿ ರಂಗಪ್ಪ, ಈಸಿಒ ಕರಿಯಣ್ಣ, ಗೋವಿಂದಪ್ಪ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ಎಲ್ಲ ವಿದ್ಯಾರ್ಥಿಗಳು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು.

ಆಹಾರದಲ್ಲಿ ವ್ಯತ್ಯಾಸ ಆದ ಪರಿಣಾಮ ತಲೆನೋವು, ಹೊಟ್ಟೆ ನೋವು ಹಾಗೂ ಸುಸ್ತು ವಿದ್ಯಾರ್ಥಿಗಳಿಗೆ ಆಗಿದೆ. ಈಗಾಗಲೇ ಸೂಕ್ತ ಚಿಕಿತ್ಸೆ ನೀಡಿರುವುದರಿಂದ ಎಲ್ಲರೂ ಆರೋಗ್ಯವಾಗಿದ್ದಾರೆ.

| ಡಾ.ಬಾಬು ರಾಜೇಂದ್ರ ಪ್ರಸಾದ್​ ಮುಖ್ಯ ವೈದ್ಯಾಧಿಕಾರಿ

ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಶಿರಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net