

ಶಿರಾ: ನಗರದ ಇಂದಿರಾ ಕ್ಯಾಂಟೀನಲ್ಲಿ ಬೆಳಗ್ಗೆ 9.30ಕ್ಕೆ ತಿಂಡಿ ಹಾಗೂ ರಾತ್ರಿ 8 ಗಂಟೆಗೇ ಊಟ ಖಾಲಿಯಾಗುತ್ತಿದ್ದು, ತಿಂಡಿ, ಊಟಕ್ಕಾಗಿ ಬಂದ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಯ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿನ ಜತೆಗೆ ಬಳಸುವ ನೀರೂ ಲಭ್ಯ ಇರುವುದ್ಲಿ. ಬೆಳಗ್ಗೆ 9.30ಕ್ಕೆ 450 ತಿಂಡಿ ಟೋಕನ್ ನೀಡಿರುವುದಾಗಿ ಹೇಳುವ ಸಿಬ್ಬಂದಿ, ದಾಖಲೆ ಕೇಳಿದರೆ ಮಷಿನ್ ಕೆಟ್ಟುಹೋಗಿದೆ. ಮ್ಯಾನೇಜರ್ ರಜೆಯಲ್ಲಿದ್ದಾರೆ ಎಂಬ ಉತ್ತರ ನೀಡುತ್ತಾರೆ. ನೀರಿನ ಪಂಪ್ ದುರಸ್ತಿಯಲ್ಲಿದೆ, ವಾಟರ್ ಫಿಲ್ಟೃರ್ ಹಾಳಾಗಿದೆ, ನಮಗೆ 5 ತಿಂಗಳಿಂದ ಸಂಬಳ ವಾಗ್ಲಿ ಎಂದು ಅಲ್ಲಿನ ಸಿಬ್ಬಂದಿಯೇ ಅಳಲು ತೋಡಿಕೊಳ್ಳುತ್ತಿದ್ದಾರೆ.
ನೀರಿನ ಫಿಲ್ಟೃರ್ ಹಾಳಾಗಿರುವುದರ ಬಗ್ಗೆ ನನಗೆ ಮಾಹಿತಿ ಇ್ಲ. ಖುದ್ದಾಗಿ ಭೇಟಿ ನೀಡಿ ಸಿಬ್ಬಂದಿ ಹಾಗೂ ತಾಂತ್ರಿಕ ಸಮಸ್ಯೆ ಬಗೆಹರಿಸುವೆ. ಶ್ರೀನಿವಾಸ್, ಆಯುಕ್ತರು ನಗರಸಭೆ ಶಿರಾ ಇಂದಿರಾ ಕ್ಯಾಂಟೀನ್ ವ್ಯವಸ್ಥೆ ಸರಿಯ್ಲಿ. ತಿಂಡಿ, ಊಟಕ್ಕೆ ಹೋದರೆ ಖಾಲಿಯಾಗಿದೆ ಎಂದು ಕಳಿಸುತ್ತಾರೆ. ಆಸ್ಪತ್ರೆ ಮುಂದೆ ಇರುವುದರಿಂದ ಇಂದಿರಾ ಕ್ಯಾಂಟೀನ್ ರೋಗಿಗಳಿಗೆ ತುಂಬ ಅನುಕೂಲಕರವಾಗಿತ್ತು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ವ್ಯವಸ್ಥೆ ಸರಿಪಡಿಸಲು ಮುಂದಾಗಲಿ. ರಾಮಣ್ಣ, ಪಟ್ಟನಾಯಕನಹಳ್ಳಿ