ಶಿರಹಟ್ಟಿಯಲ್ಲಿ ಬಿಎಸ್ಸೆನ್ನೆಲ್ ಸೇವೆ ಪುನರಾರಂಭ

10srt-2 BSNL N ews file Photo
Published on

ಶಿರಹಟ್ಟಿ: ಪಟ್ಟಣದ ಬಿಎಸ್ಸೆನ್ನೆಲ್ ಸೇವೆ ಪುನರಾರಂಭವಾಗಿದ್ದು ಬಳಕೆದಾರರು ನಿಟ್ಟುಸಿರು ಬಿಟ್ಟಿದ್ದಾರೆ. ವಾರದ ಹಿಂದೆ ವಿದ್ಯುತ್ ಅವಘಡದಿಂದ ಬಿಸ್ಸೆನ್ನೆಲ್ ಕಚೇರಿ ಬಳಿ ಇದ್ದ ಟಿಸಿ ಸುಟ್ಟಿದ್ದರಿಂದ ಮೊಬೈಲ್ ಸೇವೆ ಇಲ್ಲದೆ ಗ್ರಾಹಕರು ಪರದಾಡುವಂತಾಗಿತ್ತು. ಈ ಕುರಿತು ಸೆ.9 ರಂದು ವಿಜಯವಾಣಿಯಲ್ಲಿ ವರದಿ ಪ್ರಕಟಿಸಲಾಗಿತ್ತು. ವರದಿಗೆ ಸ್ಪಂದಿಸಿದ ವಿಭಾಗೀಯ ಸಹಾಯಕ ಇಂಜಿನಿಯರ್ ಎಸ್.ಐ. ಶಿರಹಟ್ಟಿ, ಹೊಸ ಟಿಸಿ ಅಳವಡಿಸುವ ಮೂಲಕ ಬಿಎಸ್ಸೆನ್ನೆಲ್ ನೆಟ್​ವರ್ಕ್ ಸೇವೆ ಲಭ್ಯವಾಗುವಂತೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net