ಶಿರಸಿ ಹೊಸ ಜಿಲ್ಲೆ ಘೊಷಿಸಿ

22 YLP 04
Published on

ಯಲ್ಲಾಪುರ: ಘಟ್ಟದ ಮೇಲಿನ ತಾಲೂಕುಗಳನ್ನೊಳಗೊಂಡು ಶಿರಸಿಯನ್ನು ಪ್ರತ್ಯೇಕ ಜಿಲ್ಲೆಯಾಗಿಸಬೇಕು. ಬನವಾಸಿಯನ್ನು ತಾಲೂಕಾಗಿ ಘೊಷಿಸಬೇಕು ಎಂದು ಆಗ್ರಹಿಸಿ ಶಿರಸಿ ಜಿಲ್ಲಾ ಹೋರಾಟ ಸಮಿತಿಯ ಪ್ರಮುಖರು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರ ಯಲ್ಲಾಪುರ ಕಚೇರಿಯಲ್ಲಿ ಮಂಗಳವಾರ ಸಾಂಕೇತಿಕ ಧರಣಿ ನಡೆಸಿ, ಕಾರ್ಯಾಲಯದ ವ್ಯವಸ್ಥಾಪಕ ಎನ್.ಆರ್. ಭಟ್ಟ ಅವರಿಗೆ ಮನವಿ ಸಲ್ಲಿಸಿದರು.

ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಮಾತನಾಡಿ, ನವೆಂಬರ್ 1ರೊಳಗೆ ಶಿರಸಿ ಜಿಲ್ಲೆ ಘೊಷಣೆ ಮಾಡಬೇಕು ಎಂದು ಹೋರಾಟ ತೀವ್ರಗೊಳಿಸಲಾಗುತ್ತಿದೆ. ಅಕ್ಟೋಬರ್ 2ರಂದು ಶಿರಸಿಯಲ್ಲಿ ಗಾಂಧಿ ಪ್ರತಿಮೆ ಎದುರು ತಮಟೆ ಬಾರಿಸಿ ಪ್ರತಿಭಟನೆ, ಅ. 14 ರಾತ್ರಿ ಪಂಜಿನ ಮೆರವಣಿಗೆ, 15ರಿಂದ ನಿರಂತರ ಸತ್ಯಾಗ್ರಹ ನಡೆಸಲಾಗುವುದು. ನ. 1ರೊಳಗೆ ಘೊಷಣೆಯಾಗದಿದ್ದರೆ ಬನವಾಸಿಯಲ್ಲಿ ನ. 1 ರಂದು ಕರಾಳ ದಿನಾಚರಣೆ ಹಾಗೂ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಎಂದು ಎಚ್ಚರಿಸಿದರು. ಹೋರಾಟ ಸಮಿತಿ ಕಾರ್ಯದರ್ಶಿ ಮಂಜುನಾಥ ಮೊಗೇರ, ಸಂಚಾಲಕ ಎಂ.ಎಂ. ಭಟ್ಟ, ಖಜಾಂಚಿ ಶ್ರೀಧರ ಮೊಗೇರ, ಬನವಾಸಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಉದಯ ಕಾನಳ್ಳಿ, ಪ್ರಮುಖರಾದ ಪರಮಾನಂದ ಹೆಗಡೆ, ರಾಘು ಕಾನಡೆ, ಅಶೋಕ ಭಟ್ಟ, ವಿನಾಯಕ ಹೊಸಪಟ್ಟಣ, ವಿನಾಯಕ ಆಚಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net