ಶಿರಸಿ ಹುಡುಗನಿಂದ ದಾಖಲೆ

13 vikram 6 (Yashas Kurubar)
Published on

ಧಾರವಾಡ: ಶಿರಸಿಯ ಬಾಲಕ ಯಶಸ್ ಪ್ರವೀಣ ಕುರುಬರ 16ಕ್ಕಿಂತ ಕಿರಿಯರ ಹ್ಯಾಮರ್ ಎಸೆತದಲ್ಲಿ ದಕ್ಷಿಣ ಭಾರತ ನೂತನ ದಾಖಲೆಯೊಂದಿಗೆ ಚಿನ್ನದ ಪದಕ ಬಾಚಿಕೊಂಡಿದ್ದಾನೆ.
ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಿರಿಯರ ದಕ್ಷಿಣ ಭಾರತ ಅಥ್ಲೆಟಿಕ್ ಕೂಟದ 16ಕ್ಕಿಂತ ಕಿರಿಯ ಬಾಲಕರ ಹ್ಯಾಮರ್ ಎಸೆತದ ಸ್ಪರ್ಧೆಯಲ್ಲಿ 61.96 ಮೀಟರ್‌ಗಳ ದೂರ ದಾಖಲಿಸಿ, 2020-21ನೇ ಸಾಲಿನಲ್ಲಿ ಕೇರಳದ ಕಲ್ಲಿಕೋಟೆಯಲ್ಲಿ ಏರ್ಪಡಿಸಿದ್ದ ಕಳೆದ ಕೂಟದಲ್ಲಿ ತಾವೇ ಸ್ಥಾಪಿಸಿದ್ದ 52.19 ಮೀಟರ್‌ಗಳ ದಾಖಲೆಯನ್ನು ಉತ್ತಮ ಪಡಿಸಿದ್ದಾರೆ.
ಯಶಸ್ ಉತ್ತಮ ಕ್ರಿಕೆಟ್ ಪಟುವಾಗಿದ್ದು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಧಾರವಾಡ ವಲಯ 2ನೇ ಡಿವಿಜನ್ ಲೀಗ್ ಪಂದ್ಯಗಳಲ್ಲಿ ಧಾರವಾಡದ ಕ್ರಿಕೆಟ್ ಕ್ಲಬ್ ಆಫ್ ಕರ್ನಾಟಕ(ಸಿಸಿಕೆ) ಪರ ಆಡಿದ್ದಾರೆ. ಯಶಸ್ ಸಾಧನೆಗೆ ಸಚಿವ ಶಿವರಾಮ ಹೆಬ್ಬಾರ, ಸಿಸಿಕೆ ಗೌರವ ಕಾರ್ಯದರ್ಶಿ ವಸಂತ ಮುರ್ಡೇಶ್ವರ ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net