ಶಿರವಾಳದಲ್ಲಿ ಮೌಲಾಲಿ ಹೆಜ್ಜೆ ಮೇಳ ಸಂಘ ಆರಂಭ

IMG-20230825-WA0011
Published on

ಅಫಜಲಪುರ: ಗ್ರಾಮೀಣ ಭಾಗದಲ್ಲಿ ಹಾಸುಹೊಕ್ಕಾಗಿಬೆಳೆದುಬಂದಿರುವ ಜಾನಪದ ಸಂಪತ್ತು ಇತ್ತೀಚಿಗೆ ಹಲವಾರು ಕಾಣಗಳಿಂದ ಮರೆಯಾಗುತ್ತಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರತಿ ವರ್ಷ ಗ್ರಾಮೀಣ ಭಾಗದಲ್ಲಿ ಜಾನದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಮತ್ತು ಕಲಾವಿದರಿಗೆ ಪ್ರೋತ್ಸಾಹಿಸಬೇಕು ಎಂದು ಗ್ರಾಪಂ ಮಾಜಿ ಸದಸ್ಯ ಬಸವರಾಜ ಲಾಳಸಂಗಿ ತಿಳಿಸಿದರು.

ತಾಲೂಕಿನ ಶಿರವಾಳ ಗ್ರಾಮದಲ್ಲಿ ಮೌಲಾಲಿ ಹೆಜ್ಜೆ ಮೇಳ ಸಂಘವನ್ನು ಉದ್ಘಾಟಿಸಿ ಮಾತನಾಡಿ ಶಿರವಾಳ ಗ್ರಾಮದ ಗೆಳೆಯರ ಬಳಗವು ಆರಂಭಿಸಿರುವ ಮೌಲಾಲಿ ಹೆಜ್ಜೆ ಮೇಳ ಸಂಘ ಹೆಮ್ಮರವಾಗಿ ಬೆಳೆದು ಜಾನಪದ ಸಾಹಿತ್ಯ ಮುಂದಿನ ಪೀಳಿಗೆಗೆ ದಾರಿ ದೀಪವಾಗಲಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವೇ.ಚನ್ನಯ್ಯ ಹಿರೇಮಠ, ಮಳೆಪ್ಪ ಕರಜಗಿ, ಅಣ್ಣಾರಾಯ ಅಂಜುಟಗಿ, ಚಾಂದ ಚೌಧರಿ, ಹಣಂಮತ ಮಾಂಗ, ಯಶವಂತ ದುಬಾರಿ, ಬಂಗಾರಪ್ಪ ಕರಜಗಿ, ಸತೀಶ ಅಂದೊಡಗಿ, ದಯಪ್ಪ ರೆಡ್ಡಿ ಇತರರಿದ್ದರು.

ನಮ್ಮ ಪೂರ್ವಜರು ಬಿಟ್ಟು ಹೋಗಿರುವ ಜಾನಪದ ಕಲೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸರಕಾರವು ಜಾನಪದ ಕಲಾವಿದರಿಗೆ ಪ್ರೋತ್ಸಾಹಿಸಿ ವೇದಿಕೆ ಕಲ್ಪಿಸುವ ಕೆಲಸ ಮಾಡಬೇಕು.

-ಮಳೆಪ್ಪ ಕರಜಗಿ ಮೌಲಾಲಿ ಹೆಜ್ಜೆ ಮೇಳದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net