ಶಿಬಿರದ ಲಾಭ ಪಡೆದ ರಾಜ್ಯ, ಮಹಾರಾಷ್ಟ್ರದ ದಂಪತಿ

21-10
ಮಿರಜ ಸಚಿನ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಶಿಬಿರಕ್ಕೆ ಡಾ. ನೇಹಾ ಸುಗನ್ನವರ ಚಾಲನೆ ನೀಡಿದರು. ಡಾ. ಸಚಿನ ಸುಗನ್ನವರ ಇತರರಿದ್ದರು.
Published on

ಕಾಗವಾಡ, ಬೆಳಗಾವಿ: ಮಹಾರಾಷ್ಟ್ರ ಮಿರಜದ ಸಚಿನ ಆಸ್ಪತ್ರೆಯಲ್ಲಿ ಈಚೆಗೆ ಜರುಗಿದ ಉಚಿತ ಸ್ತ್ರೀ ರೋಗ ಮತ್ತು ಬಂಜೆತನ ನಿವಾರಣೆ ಶಿಬಿರದಲ್ಲಿ ನೂರಾರು ದಂಪತಿ ಭಾಗವಹಿಸಿ, ಲಾಭ ಪಡೆದರು.

ಉಚಿತ ಶಿಬಿರಕ್ಕೆ ಡಾ. ಸಚಿನ ಸುಗನ್ನವರ ಹಾಗೂ ಡಾ. ನೇಹಾ ಸುಗನ್ನವರ ಚಾಲನೆ ನೀಡಿದರು. ಆಸ್ಪತ್ರೆಯಲ್ಲಿ ಐಯುಐ, ಐವಿಎಫ್, ಐಸಿಎಸ್‌ಐ, ಐಎಂಎಸ್‌ಐ ಮತ್ತು ಟೆಸ್ಟ್‌ಟ್ಯೂಬ್ ಬೇಬಿ ಪರ್ಯಾಯ ವಿಷಯಗಳು ಹಾಗೂ ಪುರುಷ ಬಂಜೆತನ, ಲೈಂಗಿಕ ಸಮಸ್ಯೆಗಳ ಮೇಲೆ ಆಧುನಿಕ ಪದ್ಧತಿಯ ಉಪಚಾರ ಕುರಿತು ಡಾ. ಸಚಿನ ಮಾರ್ಗದರ್ಶನ ನೀಡಿದರು.

ನಂತರ ಜರುಗಿದ ಉಪಚಾರ ಶಿಬಿರದಲ್ಲಿ ನೂರಾರು ಶಿಬಿರಾರ್ಥಿಗಳನ್ನು ತಪಾಸಣೆ ಮಾಡಿ, ಯೋಗ್ಯ ಸಲಹೆ ಸೂಚನೆ ನೀಡಲಾಯಿತು. ಶಿಬಿರದಲ್ಲಿ ರಾಜ್ಯ, ಮಹಾರಾಷ್ಟ್ರದ ನೂರಾರು ದಂಪತಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net