ಶಿಡ್ಲಘಟ್ಟ ಆಹಾರ ತಯಾರಿಕ ಘಟಕದಲ್ಲಿ ಸಮಸ್ಯೆ ಇಲ್ಲ

26SDLP 01
Published on

ಶಿಡ್ಲಘಟ್ಟ : ತಾಲೂಕಿನ ಹೊರವಲಯದ ಹನುಮಂತಪುರದ ಬಳಿಯ ಮಹಿಳಾ ಪೂರಕ ಪೌಷ್ಠಿಕ ಆಹಾರ ಉತ್ಪಾದನಾ ಘಟಕ (ಎಂಎಸ್‌ಪಿಟಿಸಿ) ಕ್ಕೆ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆಹಾರ ಪದಾರ್ಥ ತಯಾರಿಸುವ ಘಟಕಗಳಲ್ಲಿ ವ್ಯವಸ್ಥಿತ ವಾತಾವರಣ ಸೇರಿ ಸ್ವಚ್ಛತೆಯಿರುವುದಿಲ್ಲ ಎಂಬ ಸಾರ್ವಜನಿಕರ ತಕರಾರಿನ ಮೇರೆಗೆ ತಾಲೂಕಿನ ಘಟಕಕ್ಕೆ ಭೇಟಿ ನೀಡಿದ್ದು, ಘಟಕದಲ್ಲಿ ಯಾವುದೇ ಸಮಸ್ಯೆಯಿಲ್ಲ. ಸ್ವಚ್ಛತೆ ಸೇರಿ ಮಹಿಳೆಯರು ಶಿಸ್ತಿನಿಂದ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ ಎಂದರು.

ರಾಜ್ಯದ ಎಲ್ಲ ಎಂಎಸ್‌ಪಿಟಿಸಿ ಘಟಕಗಳಿಗೂ ಭೇಟಿ ನೀಡುತ್ತಿದ್ದು ಸ್ವಚ್ಛತೆ ಸೇರಿ ಗುಣಮಟ್ಟ ಕಾಪಾಡಿಕೊಳ್ಳಲು ಸೂಚನೆ ನೀಡಲಾಗುತ್ತಿದೆ, ಗರ್ಭಿಣಿ, ಬಾಣಂತಿ ಹಾಗೂ 0-6 ವರ್ಷದ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವಲ್ಲಿ ಇಲಾಖೆಯ ಪಾತ್ರ ಮಹತ್ವದ್ದಾಗಿದೆ ಎಂದರು.

ಜಿಲ್ಲಾಧಿಕಾರಿ ಆರ್.ಲತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಸುರೇಖಾ, ಉಪನಿರ್ದೇಶಕ ನಾರಾಯಣಸ್ವಾಮಿ, ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ತಹಸೀಲ್ದಾರ್ ಕೆ.ಅರುಂಧತಿ, ಸಿಡಿಪಿಒ ನಾಗವೇಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net