ಶಿಕ್ಷೆ ವಿಧಿಸಲು ಸಹಕಾರಿಯಾಗಿದೆ ಕಾಯ್ದೆ

2 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಮ್ಮ ಸ್ವಸ್ಥ ಸಮಾಜ ಕಟ್ಟುವಲ್ಲಿ ಪ್ರತಿಯೊಬ್ಬರು ಅಪರಾಧಿಕ ಮನೋಭಾವನೆಯಿಂದ ಹೊರಬರಬೇಕು ಎಂದು ವಿಶ್ರಾಂತ ಜಿಲ್ಲಾ ನ್ಯಾಯಾಧೀಶ ಶ್ರೀಕಾಂತ ಬಬಲಾದಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾನೂನು ಮಂಟಪ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಪೋಕ್ಸೊ ಕಾಯ್ದೆ ಮತ್ತು ನಮ್ಮ ಸಮಾಜ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಲಕ್ಕೆ ತಕ್ಕಂತೆ ಸಮಾಜ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಕಾನೂನಿನಲ್ಲಿ ನ್ಯೂನ್ಯತೆ ಹುಡುಕಿ ತಿದ್ದುಪಡಿ ಮಾಡುತ್ತಾ ಆರೊಪಿಗಳಿಗೆ ತಕ್ಕ ಶಿಕ್ಷೆಯಾಗುವಲ್ಲಿ ಮತ್ತು ಕಾನೂನು ರಚನೆಯಲ್ಲಿ ಹಿಂದೆ ಬೀಳಬಾರದು ಎಂದು ಭಾರತದಲ್ಲಿ ಬಿಗಿಯಾದ ಪೋಕ್ಸೊ ಕಾನೂನು ಪರಿಣಾಮಕಾರಿಯಾಗಿದೆ. ಜನ ಸಾಮಾನ್ಯರಲ್ಲಿರುವ ಸಮಸ್ಯೆ ಏನು? ಕಾನೂನಿನ ಅನುಷ್ಠಾನದ ಪರಿಕಲ್ಪನೆಯಲ್ಲಿ ಹಿಂದಿನ ಭಾರತೀಯ ದಂಡ ಸಂಹಿತೆಯಲ್ಲಿ ಮಕ್ಕಳ ಮೇಲಿನ ಅಪರಾಧಕ್ಕೆ ತಕ್ಕಂತೆ ಶಿಕ್ಷೆ ಇರಲಿಲ್ಲ. ಅಪರಾಧಿಗಳಿಗೆ ತಕ್ಕ ಶಿಕ್ಷೆ ವಿಧಿಸುವಲ್ಲಿ ಪ್ರತ್ಯೇಕ ಪೋಕ್ಸೊ ಕಾಯ್ದೆ ಜಾರಿಗೆ ತಂದಿರುವುದು ಸಹಕಾರಿ ಆಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ ಕೆ.ಬಿ. ನಾವಲಗಿಮಠ ಮಾತನಾಡಿ, ಊಹೆ ಮತ್ತು ತರ್ಕದ ಆಧಾರದ ಮೇಲೆ ಆರೋಪಿಗಳಿಗೆ ಶಿಕ್ಷೆ ವಿಧಿಸುವಾಗ ಹಳೇ ಗ್ರಹಿಕೆ ಬಿಟ್ಟು ಕಾನೂನಿನ ಪರಿಕಲ್ಪನೆಯ ಅರ್ಥ ಮಾಡಿಕೊಳ್ಳುವಲ್ಲಿ ನ್ಯಾಯಾಧೀಶರು, ವಕೀಲರು ಅಳವಾಗಿ ಅಧ್ಯಯನ ಮಾಡುವುದು ಅವಶ್ಯ ಎಂದರು.
ಚಂದ್ರಕಾಂತ ಬೆಲ್ಲದ, ಮಹಾನಂದಾ ಮುದೇನಗುಡಿ, ಸಿ.ಎಸ್. ನಾಗಶೆಟ್ಟಿ, ಪ್ರೊ. ಎನ್.ಆರ್. ಬಾಳಿಕಾಯಿ, ಚಂದ್ರಶೇಖರ ಮಹಾಜನಶೆಟ್ಟರ್, ನಿಂಗಪ್ಪ ಕಂಬಾರ, ಅಶೋಕ ಕೋರಿ, ಸಿ.ಎಸ್. ಪೊಲೀಸ್ ಪಾಟೀಲ, ವಿ.ಎನ್. ಕಡಿ, ಇತರರು ಇದ್ದರು.
ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರು ಹಿರೇಮಠ ನಿರೂಪಿಸಿದರು. ಶಂಕರ ಹಲಗತ್ತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net