ಶಿಕ್ಷಣದೊಂದಿಗೆ ಸಂಸ್ಕಾರವೂ ಇರಲಿ

8
Published on

ಗೋಕಾಕ: ವಿದ್ಯಾರ್ಥಿಗಳು ದೇಶಕಟ್ಟುವ ಪ್ರಜೆಗಳಾಗಿದ್ದು, ಶಿಕ್ಷಣದೊಂದಿಗೆ ಸಂಸ್ಕಾರ ಪಡೆದು ಉತ್ತಮ ನಾಗರಿಕರಾಗಿ ಎಂದು ಸಾಹಿತಿ ಡಾ.ನಾ.ಸೋಮೇಶ್ವರ ಹೇಳಿದರು. ನಗರದ ಕೆಎಲ್​ಇ ಸಿ.ಎಸ್​.ಅಂಗಡಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ರ್ನಿದಿಷ್ಟ ಗುರಿಯೊಂದಿಗೆ ಗುರುಗಳ ಮಾರ್ಗದರ್ಶನದಲ್ಲಿ ಪ್ರಯತ್ನಶಿಲರಾಗೇಕು. ಕನ್ನಡದ ವಿದ್ಯಾರ್ಥಿಗಳು ಪ್ರತಿಭಾವಂತರಿದ್ದು, ತಮ್ಮ ಗುರಿಯನ್ನು ಕೇಂದ್ರಿಕರಿಸಿ ಸ್ಪರ್ಧಾತ್ಮಕ ಪರೀೆಗಳಲ್ಲೂ ಪಾಲ್ಗೊಳ್ಳಿ ಎಂದು ಸಲಹೆ ನೀಡಿದರು. ಸಂಸ್ಥೆಯಿಂದ ಡಾ.ನಾ.ಸೋಮೇಶ್ವರ ಅವರನ್ನು ಸತ್ಕರಿಸಲಾಯಿತು. ಕೆಎಲ್​ಇ ನಿರ್ದೇಶಕ ಜಯಾನಂದ ಮುನವಳ್ಳಿ, ಸ್ಥಳಿಯ ಕೆಎಲ್​ಇ ಸಂಸ್ಥೆಗಳ ಸಮಿತಿ ಅಧ್ಯಕ್ಷ ಎಂ.ಡಿ.ಚುನಮರಿ, ಆಡಳಿತಾಧಿಕಾರಿ ಜಿ.ಎಂ.ಅಂದಾನಿ, ಪ್ರಾಚಾರ್ಯ ಕೆ.ಬಿ.ಮೇವುಂಡಿಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net