ಶಿಕ್ಷಣದಿಂದ ದೇಶದ ಅಭಿವೃದ್ಧಿ

CTD 20 URDU--04
Published on

ಚಿತ್ರದುರ್ಗ: ವಿದ್ಯಾರ್ಥಿಗಳ ಹಾಜರಾತಿ ಕ್ಷೀಣಿಸುತ್ತಿರುವುದರಿಂದ ಸರ್ಕಾರಿ ಉರ್ದು ಶಾಲೆಗಳು ಕಣ್ಮರೆಯಾಗುತ್ತಿವೆ ಎಂದು ಡಯಟ್‌ನ ಹಿರಿಯ ಉಪನ್ಯಾಸಕ ವೆಂಕಟೇಶ್ ಆತಂಕ ವ್ಯಕ್ತಪಡಿಸಿದರು.

ನಗರದ ಮುಸ್ಲಿಂ ಎಜುಕೇಷನಲ್ ಆ್ಯಂಡ್ ಎಂಪವರ್‌ಮೆಂಟ್ ಟ್ರಸ್ಟ್ ಉರ್ದು ಶಿಕ್ಷಕರಿಗೆ ಅಹಮದ್ ಪ್ಯಾಲೇಸ್‌ನಲ್ಲಿ ಗುರುವಾರ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರೈಮರಿ,ಸೆಕಂಡರಿ ಶಿಕ್ಷಣ ಪೂರೈಸಿ ಡಿಗ್ರಿಗೆ ಬರುವ ಹೊತ್ತಿಗೆ ಶೇ.30 ಮುಸ್ಲಿಂ ವಿದ್ಯಾರ್ಥಿಗಳು ಉಳಿಯುವಂತಾಗಿದೆ. ಬಡತನದ ಕಾರಣಕ್ಕೆ ಅನೇಕರು ಶಿಕ್ಷಣದಿಂದ ಹೊರಗುಳಿಯುವಂತಾಗಿದೆ. ದೇಶದ ಅಭಿವೃದ್ಧಿಗೆ ಶಿಕ್ಷಣದಿಂದ ಸಾಧ್ಯ,ಆದ್ದರಿಂದ ಪಾಲಕರು,ಶಿಕ್ಷಕರು ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಬೇಕಿದೆ. ಉರ್ದು ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗುತ್ತಿದ್ದು, ಆದರೆ ಶಿಕ್ಷಕರ ಸಂಖ್ಯೆ ಜಾಸ್ತಿ ಇದೆ. ಹಾಜರಾತಿ ಹೆಚ್ಚಳದಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾರುತೇಶ್ ಮಾತನಾಡಿ,ಸಾಮಾಜಿಕ,ಆರ್ಥಿಕ ಸಮಸ್ಯೆ ನಿವಾರಣೆಗೆ ಶಿಕ್ಷಣವೊಂದೆ ಅಸ್ತ್ರ ವೆಂ ದರು. ಸಾವಿತ್ರಿ ಬಾಪುಲೆ ಜನ್ಮ ದಿನವನ್ನು ಶಿಕ್ಷಕಿಯರ ದಿನಾಚರಣೆಯನ್ನಾಗಿ ಆಚರಿಸಬೇಕಿದೆ ಎಂದ ಅವರು,ಫಾತಿಮಾಶೇಖ್ ಮೊದಲ ಶಿಕ್ಷಕಿ ಎಂದು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ಬಿಇಒ ಎಚ್.ಗಿರಿಜಾ ಮಾತನಾಡಿ,ಉರ್ದು ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಭಾಷಾ ಶಿಕ್ಷಕರ ಅವಶ್ಯಕತೆ ಹಾಗೂ ಜವಾಬ್ದಾರಿ ಜಾಸ್ತಿಯಿದೆ. ನೀವು ಮಾಡುವ ಕೆಲಸದಿಂದ ನಿಮಗೆ ಆತ್ಮ ತೃಪ್ತಿ ಸಿಗಬೇಕೆಂದು ಶಿಕ್ಷಕರಿಗೆ ಸಲಹೆ ನೀಡಿ ದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸಂಪತ್ ಮಾತನಾಡಿ,ಟ್ರಸ್ಟ್ ಅಧ್ಯಕ್ಷ ಸೈಯದ್ ಇಸಾಖ್ ಮಾತನಾಡಿದರು. ನಿವೃತ್ತ ಡಿವೈಎಸ್ಪಿಗಳಾದ ಅ ಬ್ದುಲ್‌ರೆಹಮಾನ್,ಯೂಸೂಫ್,ನಿವೃತ್ತ ಪ್ರಾಚಾರ‌್ಯ ಮಹಮದ್ ಜಕಾವುಲ್ಲಾ,ಇಸಿಒ ಸಮೀರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net