ಶಿಕ್ಷಣದಿಂದ ಉತ್ತಮ ಸಂಸ್ಕಾರ ಸಾಧ್ಯ

13ydg02
Published on

ಯಾದಗಿರಿ: ಪ್ರತಿಯೊಬ್ಬರು ಸಂಸ್ಕಾರವಂತರಾಗಿ ಬಾಳ ಬೇಕಾದರೆ ಶಿಕ್ಷಣ ಅವಶ್ಯಕ. ಹೀಗಾಗಿ ತಪ್ಪದೆ ಶಿಕ್ಷಣ ಪಡೆಯಬೇಕು ಎಂದು ಡಾ.ಗಂಗಾಧರ ಮಹಾ ಸ್ವಾಮಿಗಳು ಸಲಹೆ ನೀಡಿದರು.

ಭಾನುವಾರ ತಾಲೂಕಿನ ಅಬ್ಬೆತುಮಕೂರಿನ ವಿಶ್ವಾರಾಧ್ಯರ ಮಠದಲ್ಲಿ ಬಲಕಲ್ನ ಶ್ರೀ ವಿಶ್ವ ಸಂಸ್ಕೃತಿ ಸೇವಾ ಸಂಸ್ಥೆಯ ದ್ವಿತೀಯ ವಾಷರ್ಿಕೋತ್ಸವ ಹಾಗೂ ವಿಶ್ವರತ್ನ ಪ್ರಶಸ್ತಿ ಪ್ರಧಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಶಿಕ್ಷಣ ಉತ್ತಮವಾದ ನಡೆ-ನುಡಿಯನ್ನು ಕಲಿಸಿಕೊಡುತ್ತದೆ. ಸುಸಂಸ್ಕೃತರಾಗಿ, ಆದರ್ಶವಂತರಾಗಿ, ಸಮಾಜದಲ್ಲಿ ಒಬ್ಬಜವಾಬ್ದಾರಿ ನಾಗರಿಕನಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.

ಭರತಖಂಡದಲ್ಲಿ ಅನೇಕ ಸಾಧಕರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ್ದಾರೆ. ಇದರಿಂದ ದೇಶಕ್ಕೆ ಉನ್ನತ ಗೌರವ ಸಿಕ್ಕಿದೆೆ. ಇದೆಲ್ಲ ಶಿಕ್ಷಣದಿಂದ. ಗ್ರಾಮೀಣ ಭಾಗದಲ್ಲಿನ ಪಾಲಕರು ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳಿಸದೆ, ವಿದ್ಯೆ ಕೊಡಿಸುವ ಮೂಲಕ ಅವರ ಬಾಳು ಹಸನಾಗುವಂತೆ ಮಾಡಬೇಕು. ಸಂಘ-ಸಂಸ್ಥೆಗಳು ಸಹ ಶೈಕ್ಷಣಿಕ, ಸಾಮಾಜಿಕ ಕಾರ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಇದೇ ವೇಳೆ ಖ್ಯಾತ ವೈದ್ಯ ಡಾ.ಎಸ್.ಬಿ.ಕಾಮರೆಡ್ಡಿ, ಚನ್ನಪ್ಪಗೌಡ ಮೋಸಂಬಿ, ರಮೇಶ ಟಕ್ಕಳಕಿ, ಮಹೇಶಗೌಡ ಸುಬೇದಾರ, ಬಸವರಾಜ ಅಂಗಡಿಗೆ ವಿಶ್ವರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net