ಶಿಕ್ಷಣದಿಂದ ಅಭಿವೃದ್ಧಿ ಸಾಧ್ಯ

1-8aurad1
Published on

ಔರಾದ್: ಶಿಕ್ಷಣದಿಂದ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕಾಂಗ್ರೆಸ್ ಯುವ ಮುಖಂಡ ಸುಧಾಕರ ಕೊಳ್ಳುರ್ ಹೇಳಿದರು. ಶನಿವಾರ ತಾಲೂಕಿನ ಹಂದಿಕೇರಾ ಗ್ರಾಮದಲ್ಲಿ ಸಾಹಿತ್ಯ ರತ್ನ ಅಣ್ಣಾಭಾವು ಸಾಠೆ ಅವರ 100ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದುಳಿದ ವರ್ಗಗಳ ಸಮುದಾಯದ ಅಭಿವೃದ್ಧಿಗೆ ಅನುದಾನ ಮುಖ್ಯವಲ್ಲ. ಹಿಂದುಳಿದ ಜನರು ಶಿಕ್ಷಣವನ್ನು ಪಡೆದರೆ ಮಾತ್ರ ಸಮ ಸಮಾಜ ನಿರ್ಮಿಸಬಹುದು ಎಂದರು.
ಸಾಠೆ ಅವರು ಸಮಾಜದ ಏಳ್ಗೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟು ಶಿಕ್ಷಣದ ಕ್ರಾಂತಿ ಮಾಡಿದರು. ಸಮಾಜದ ಜನರ ಒಳಿತಿಗೆ ಶ್ರಮಿಸಿದ ಮಹಾನ್ ವ್ಯಕ್ತಿಯಾಗಿದ್ದ ಸಾಠೆ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಪ್ರಮುಖರಾದ ಬಾಲಾಜಿ ಕಸಲೆ, ಹರಿದೇವ ಸಂಗನಾಳ, ಶಶಿಕಾಂತ, ಡಾ. ಭಗವಂತ ಬಿರಾದಾರ, ಪಂಢರಿರಾವ ಕದಂ, ಸಂಜು ಭೋಸ್ಲೆ, ಭಗವಾನ ಬಾಲೇರಾವ, ಶಿವಾಜಿ, ಮಂಗೇಶ, ಪ್ರದೀಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net