ಶಿಕ್ಷಣದಷ್ಟೇ ಸಂಸ್ಕಾರವೂ ಅತ್ಯವಶ್ಯ

klr sammelana
ಮುಳವಾಡದಲ್ಲಿ ಶಿವರಾಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಅಭಿನವ ಸಂಗನಬಸವ ಶಿವಾಚಾರ್ಯರು, ಸದಾನಂದ ಮಹಾರಾಜರು ಚಾಲನೆ ನೀಡಿದರು. ತಾನಾಜಿ ನಾಗರಾಳ, ಹಣಮಂತ ಕಳಸಗೊಂಡ, ಫ.ಗು. ಸಿದ್ದಾಪುರ, ಮಲ್ಲಿಕಾರ್ಜುನ ಆಸಂಗಿ ಇತರರಿದ್ದರು.
Published on

ಕೊಲ್ಹಾರ: ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮಕ್ಕಳಿಗೆ ಶಿಕ್ಷಣದಷ್ಟೇ ಸಂಸ್ಕಾರವೂ ಅವಶ್ಯಕವಾಗಿದೆ ಎಂದು ಮನಗೂಳಿ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಮುಳವಾಡದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ರೇಣುಕಾದೇವಿ ಗ್ರಾಮೀಣ ಅಭಿವೃದ್ಧಿ ಶಿಕ್ಷಣ ಸಂಸ್ಥೆಯ ಶಿವರಾಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಕನ್ನಡ ಮತ್ತು ಆಂಗ್ಲ ಮಾಧ್ಯಮ 12ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಹಿಂದೆ ಪಾಲಕರು ಹೆಸ್ಕೂಲ್, ಕಾಲೇಜುವರೆಗೆ ಮಕ್ಕಳಿಗೆ ಮೊಬೈಲ್ ನೀಡುತ್ತಿರಲಿಲ್ಲ. ಕೋವಿಡ್ ಸಂದರ್ಭ ಶಿಕ್ಷಕರು ಆನ್‌ಲೈನ್ ಕ್ಲಾಸ್ ಆರಂಭಿಸಿದ್ದರಿಂದ ಅನಿವಾರ್ಯವಾಗಿ ಮೊಬೈಲ್ ಕೊಡಿಸಬೇಕಾಯಿತು. ಇದರಿಂದಾಗಿ ಎಷ್ಟೋ ಮಕ್ಕಳು ಮೊಬೈಲ್ ದುರುಪಯೋಗ ಪಡಿಸಿಕೊಂಡು ದಾರಿ ತಪ್ಪಿದ್ದರು.

ಮಕ್ಕಳ ಸಾಹಿತಿ ಪ. ಗು. ಸಿದ್ದಾಪುರ ಮಾತನಾಡಿ, ಲಂಗ ದಾವನ್ಯಾಗ ಮಸ್ತ್ ಕಾಣತಿ ಲಾವಣ್ಯ ಜಾನಪದ ಗೀತೆ ಇತ್ತೀಚೆಗೆ ಸಣ್ಣವರ ಹಿಡ್ದು ದೊಡ್ಡವರವರೆಗೆ ಬಹಳ ಜನರನ್ನು ಹುಚ್ಚು ಹಿಡಿಸಿದೆ. ಇದರಿಂದ ಪ್ರಸ್ತುತ ಹೆಸರಿನ ಹೆಣ್ಣುಮಕ್ಕಳು ಮುಜುಗರಕ್ಕೊಳಗಾಗಿ ಲಾವಣ್ಯ ಹೆಸರಿನ ಹೆಣ್ಣು ಮಕ್ಕಳು ಮನೆಯಲ್ಲಿ ಹೋಗಿ ತಂದೆ ತಾಯಿಗೆ ನನ್ನ ಹೆಸರು ಬದಲಿಸಿ ಅನ್ನುವ ಮಟ್ಟಿಗೆ ಆ ಒಂದು ಹಾಡು ಪ್ರಚಲಿತವಾಗಿದೆ. ಹಿಂತ ಸಾಹಿತ್ಯದ ಹಾಡಿನಿಂದಾಗಿ ನಮ್ಮ ಸಂಸ್ಕೃತಿ ಅವನತಿಗೆ ಕಾರಣವಾಗುತ್ತಿದೆ ಎಂದರು.

ಗ್ರಾಪಂ ಅಧ್ಯಕ್ಷ ಹಣಮಂತ ಬ. ಕಳಸಗೊಂಡ, ಬಿ. ಪಿ. ಕೆಂಗನಾಳ, ಸಂಗಮೇಶ ಕಳಸಗೊಂಡ, ರವಿ ಕೆಂಗನಾಳ, ಮಲ್ಲಿಕಾರ್ಜುನ ಆಸಂಗಿ, ಫ.ಗು. ಸಿದ್ದಾಪುರ, ಚನ್ನಪ್ಪಗೌಡ ಬಿರಾದಾರ, ಅಣ್ಣುಗೌಡ ಬಿರಾದಾರ, ಕರಿಯಪ್ಪ ಜೈನಾಪೂರ, ಮಲ್ಲು ಬಿದರಿ, ಸಂಗನಗೌಡ ಪಾಟೀಲ, ಸಂಗಮೇಶ ಕಳಸಗೊಂಡ, ಪರಶುರಾಮ ಮಲಘಾಣ, ಪತ್ರಕರ್ತರಾದ ರವಿಕುಮಾರ ತುಪ್ಪದ, ಬಸವರಾಜ ಕಂಕಣವಾಡಿ, ಕಾಂತು ಹಡಪದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net