ಶಿಕ್ಷಣದಲ್ಲಿ ಕಡ್ಡಾಯಗೊಳಿಸಿ

nrp senoeio
ಎನ್.ಆರ್.ಪುರದಲ್ಲಿ ಹಿರಿಯ ನಾಗರಿಕ ಸಮಿತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಪಿ.ಕೆ.ಬಸವರಾಜ್, ಬಿ.ಕೆ.ಜಾನಕೀರಾಮ, ಕೆ.ಎಸ್.ರಾಜಕುಮಾರ್, ಆಬೀದ್ ಇತರರಿದ್ದರು.
Published on

ಎನ್.ಆರ್.ಪುರ: ಕನ್ನಡ ನಾಡಿನಲ್ಲಿ ಇರುವವರೆಲ್ಲರೂ ಕನ್ನಡವನ್ನು ಅಗತ್ಯವಾಗಿ ಬಳಸಬೇಕೆಂದು ಹಿರಿಯ ನಾಗರಿಕರ ಸಮಿತಿ ಉಪಾಧ್ಯಕ್ಷ ಪಿ.ಕೆ.ಬಸವರಾಜ್ ಹೇಳಿದರು.

ತಾಲೂಕು ಹಿರಿಯ ನಾಗಕರಿಕರ ಸಮಿತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ಮಕ್ಕಳಿಗೆ ಮಾಧ್ಯಮಿಕ ಹಂತದವರೆಗಾದರೂ ಶಿಕ್ಷಣದಲ್ಲಿ ಕನ್ನಡ ಕಡ್ಡಾಯಗೊಳಿಸಬೇಕು. ಭಾಷೆ ಎಂದರೆ ಕೇವಲ ಅಕ್ಷರ ಜೋಡಣೆ ಆಗಬಾರದು. ಈ ನೆಲದ ಜನರ ಬದುಕಿನ ಭಾವನೆಗಳ ಸಂಗಮವಾದಾಗ ಮಾತ್ರ ಭಾಷೆ ಬೆಳೆಯುತ್ತದೆ. ನಿಟ್ಟಿನಲ್ಲಿ ಕನ್ನಡ ಹೃದಯದ ಭಾಷೆಯೊಂದೇ ಆಗದೆ ಅನ್ನದ ಭಾಷೆಯಾಗಬೇಕು. ಪ್ರಾಪಂಚಿಕ ಜ್ಞಾನವನ್ನು ಕನ್ನಡದ ಮನಗಳಿಗೆ ಮುಟ್ಟಿಸುವ ವ್ಯವಸ್ಥೆ ಆಗಬೇಕು ಎಂದರು. ಹಿರಿಯರಾದ ಬಿ.ಕೆ.ಜಾನಕೀರಾಮ, ಕೆ.ಎಸ್.ರಾಜಕುಮಾರ್, ಲಿಸ್ಸಿ, ಕೃಷ್ಣಮೂರ್ತಿ, ವಿದ್ಯಾ ನಂದಕುಮಾರ್, ಆಬೀದ್, ಟಿ.ಎಂ.ಶಿವಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net