

ಯಾದಗಿರಿ: ಸಾಮಾಜದಲ್ಲಿ ಸಮಾನತೆ ತರಲು ತಮ್ಮ ಜೀವನವಿಡಿ ಹೋರಾಟ ಮಾಡಿ, ಜಾತಿಯ ವಿಷ ವೃಕ್ಷವನ್ನು ಕಿತ್ತುಹಾಕಲು ಬಹುದೊಡ್ಡ ಕ್ರಾಂತಿಯನ್ನು ಮಾಡಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ಶಾಸಕ ಚೆನ್ನಾರಡ್ಡಿ ಪಾಟೀಲ ತುನ್ನೂರ ಬಣ್ಣಿಸಿದರು.
ಗುರುವಾರ ನಗರದ ಜಿಲ್ಲಾಡಳಿತದ ಭವನದ ಆಡಿಟೋರಿಯಂನಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ನಾರಾಯಣ ಗುರುಗಳು ತಮ್ಮ ತಂದೆಯ ಪ್ರಭಾವದಿಂದಾಗಿ ಆಯುವರ್ೇದ ಪಂಡಿತರಾಗಿ, ಆಚಾರ್ಯರಾಗಿ, ರಾಮಾಯಣ, ಮಹಾಭಾರತ ಕತೆಗಳನ್ನು ಕೇಳುತ್ತ ಬೆಳೆಯುತ್ತಾರೆ. ಸಂಸ್ಕೃತ ಅಧ್ಯಾಯನ ಮಾಡಿ ಅದರಲ್ಲಿನ ಸ್ವಾರಸ್ಯವನ್ನು ಅರಿತುಕೊಳ್ಳುತ್ತಾರೆ. ತಾವು ಪಡೆದ ಜ್ಞಾನವನ್ನು ಜನತೆಗೆ ಉಣಬಡಿಸುತ್ತಾರೆ. ಜನಕಲ್ಯಾಣಕ್ಕಾಗಿ ಟೊಂಕಕಟ್ಟಿ ನಿಲ್ಲುತ್ತಾರೆ ಎಂದರು.
ಸಾಮಾಜಿಕ ಕಾಳಜಿಯುಳ್ಳವರಾಗಿದ್ದ ಅವರು ಸಮಾಜದ ಅನಿಷ್ಟ ಪದ್ಧತಿ, ತಾರತಮ್ಯ, ಮೂಢನಂಬಿಕೆ, ಅಸಮಾನತೆ ವಿರುದ್ಧ ಧ್ವನಿ ಎತ್ತಿದ್ದರು ಮತ್ತು ಅಸಮಾನತೆ ವಿರುದ್ಧ ಹಲವಾರು ಹೋರಾಟಗಳನ್ನು ನಡೆಸಿದರು. ಕೆಳ ವರ್ಗದವರಿಗೆ ಧಾಮರ್ಿಕ ಶಿಕ್ಷಣ ನೀಡಿ, ಶಿಕ್ಷಣದ ಮಹತ್ವ ಸಾರಿ, ಇಡೀ ಜಗತ್ತಿನಲ್ಲಿ ಮೌನಕ್ರಾಂತಿ ಮಾಡಿದರು ಎಂದು ಹೇಳಿದರು.
ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಪ್ರಾಂಶುಪಾಲ ಪ್ರೋ.ಸುಭಾಶ್ಚಂದ್ರ ಕೌಲಗಿ ವಿಶೇಷ ಉಪನ್ಯಾಸ ನೀಡಿ, ಒಂದೇ ಜಾತಿ, ಒಂದೇ ಮತ ಹಾಗೂ ಒಂದೇ ದೇವರು ಎಂಬ ಸತ್ಯವಾಕ್ಯವನ್ನು ಗುರುಗಳು ಸಮಾಜಕ್ಕೆ ಸಾರಿದ್ದಾರೆ. ಕತ್ತಲ ಲೋಕಕ್ಕೆ ಜ್ಞಾನವೆಂಬ ದೀಪ ಬೆಳಗಿದ ವಿಶ್ವ ಗುರುಗಳಾಗಿ ಜಗತ್ತಿಗೆ ವಿದ್ಯೆ ಹಾಗೂ ಸಂಘಟನೆಯ ಜಾಗೃತಿ ಮೂಡಿಸಿದ ಮಹಾನ್ ಚೇತನಾ ಶಕ್ತಿಯೇ ಬ್ರಹ್ಮ ಶ್ರೀ ನಾರಾಯಣ ಗುರುಗಳು ಎಂದು ವಿವರಿಸಿದರು.