

ಕಲಬುರಗಿ: ನಗರದ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ)ದ ೩.೭ ಎಕರೆ ಜಮೀನು ಕರ್ನಾಟಕ ಪ್ರದೇಶ ಕುರುಬ ಸಂಘಕ್ಕೆ ನೀಡಿರುವ ರಾಜ್ಯ ಸಚಿವ ಸಂಪುಟದ ನಿರ್ಧಾರವನ್ನು ಖಂಡಿಸಿ ನಗರದಲ್ಲಿ ಮಹಾವಿದ್ಯಾಲಯ ಉಳಿಸಿ ಹೋರಾಟ ಸಮಿತಿ, ಎಐಡಿಎಸ್‌ಒ ಸಂಘಟನೆಯಿAದ ಬೃಹತ್ ಪ್ರತಿಭಟನೆ ನಡೆಸಿ, ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ನಗರದ ನ್ಯೂ ಆರ್‌ಟಿಒ ಕ್ರಾಸ್ ಬಳಿ ಇರುವ ಸರ್ಕಾರಿ ಮಹಾವಿದ್ಯಾಲಯದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನೂರಾರು ವಿದ್ಯಾರ್ಥಿಗಳು ಶುಕ್ರವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಸರ್ಕಾರದ ನಿರ್ಧಾರವನ್ನು ಖಂಡಿಸಿದರು.
ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ತುಳಜಾರಾಂ ಎನ್.ಕೆ.ಮಾತನಾಡಿ, ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ (ಸ್ವಾಯತ್ತ) ಐದು ಸಾವಿರಕ್ಕೂ ಹೆಚ್ಚು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಪದವಿ ಕಾಲೇಜಿಗೆ ಸೇರಿದ ೩.೭ ಎಕರೆ ಜಮೀನನ್ನು ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ಕೊಡಲು ಸಚಿವ ಸಂಪುಟದಲ್ಲಿ ನಿರ್ಧರಿಸಿರುವುದು ಖಂಡನೀಯ ಎಂದರು.
ಶೈಕ್ಷಣಿಕ ಸಂಸ್ಥೆಯ ಜಮೀನನ್ನು ಅನ್ಯ ಉz್ದÉÃಶಕ್ಕೆ ನೀಡುತ್ತಿರುವುದು ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗೆ ತೊಂದರೆ ಉಂಟು ಮಾಡುತ್ತದೆ. ಸರ್ಕಾರ ಉನ್ನತ ಶಿಕ್ಷಣವನ್ನು ಬಲಪಡಿಸಿ, ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯಗಳನ್ನು ವಿಶಾಲ ಸ್ಥಳಗಳಲ್ಲಿ ನೀಡಬೇಕು. ಆದರೆ ಇರುವ ಭೂಮಿಯನ್ನೇ ಶಿಕ್ಷಣೇತರ ಉz್ದÉÃಶಕ್ಕೆ ನೀಡುತ್ತಿರುವುದು ಆತಂಕಕಾರಿ ನಡೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಖಜಾಂಚಿ ವೆಂಕಟೇಶ ದೇವದುರ್ಗ ಮಾತನಾಡಿ, ಶಿಕ್ಷಣದ ಸ್ಥಳವನ್ನು ಸಮುದಾಯ, ರಾಜಕೀಯ ಉz್ದÉÃಶಕ್ಕೆ ಬಳಸುವುದು ನಿಲ್ಲಿಸಬೇಕು. ಕಾಲೇಜಿನ ಭೂಮಿ ಕಾಲೇಜಿಗೆ ವಾಪಸ್ ನೀಡಬೇಕು, ಸಚಿವ ಸಂಪುಟದ ನಿರ್ಧಾರ ಶೈಕ್ಷಣಿಕ ವಾತಾವರಣಕ್ಕೆ ಧಕ್ಕೆ ತರಲಿದೆ. ರಾಜ್ಯ ಸರ್ಕಾರ ಕೂಡಲೇ ಈ ಕುರಿತು ಗಮನ ಹರಿಸಿ, ವಿದ್ಯಾರ್ಥಿಗಳ, ಶಿಕ್ಷಣದ ಹಿತಾಸಕ್ತಿ ಕಾಪಾಡಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ರಾಹುಲ್ ಜಾಧವ್, ಪ್ರೀತಿ ದೊಡ್ಡಮನಿ, ನಾಗರಾಜ ರಾವೂರ, ಸಿದ್ಧಾರ್ಥ ತಿಪ್ಪನೋರ, ಬಾಬು, ಅಜಯ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿದ್ದರು.