ಶಿಕ್ಷಣದ ಬೇರು ಗಟ್ಟಿಯಾಗಲು ಸಂಸ್ಕಾರ ಮುಖ್ಯ

20MUDALGI1
Published on

ಮೂಡಲಗಿ: ವಿದ್ಯಾರ್ಥಿಗಳು ಜ್ಞಾನದ ಜತೆಗೆ ಸಂಸ್ಕಾರ ಪಡೆದುಕೊಂಡು, ಮೊಬೈಲ್ ಬಳಕೆ ಕಡಿಮೆ ಮಾಡಿ ತಾಳ್ಮೆಯಿಂದ ಅಧ್ಯಯನದಲ್ಲಿ ಸಕ್ರಿಯರಾದರೆ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಾಂಡುರಂಗ ಭಂಡಾರೆ ಹೇಳಿದರು.

ಇಲ್ಲಿನ ಅನಿತಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಆಚಾರ್ಯ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆ ಉದ್ಘಾಟನೆ ಮತ್ತು ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.

ಹುಕ್ಕೇರಿಯ ಕ್ಯಾರಗುಡ್ಡದ ಅವಜೀಕರ ಮಹಾರಾಜರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಸಮಯದ ಸದ್ವಿನಿಯೋಗ ಮಾಡಿಕೊಂಡು ಅಧ್ಯಯನ ಮಾಡಿದಾಗ, ಇನ್ನೊಬ್ಬರ ಮುಂದೆ ಕೈ ಚಾಚುವ ಅನಿವಾರ್ಯತೆ ಬರುವುದಿಲ್ಲ ಎಂದರು.

ಸಂಸ್ಥೆಯ ಅಧ್ಯಕ್ಷ ಮಲ್ಲಪ್ಪ ತೇರದಾಳ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಪ್ರಾಚಾರ್ಯ ಎಸ್.ಬಡಿಗೇರ, ಭೀಮಪ್ಪ ಗಡಾದ ಮಾತನಾಡಿದರು. ಮಲ್ಲಿಕಾರ್ಜುನ ಕಟ್ಟೂರ, ಚನ್ನಬಸು ಬಡ್ಡಿ, ಮಲ್ಲಪ್ಪ ಗಾಣಿಗೇರ, ಮಲ್ಲಪ್ಪ ಢವಳೇಶ್ವರ, ಉಪನ್ಯಾಸಕರಾದ ವಿಷ್ಣು ಬಾಗಡಿ, ಜ್ಯೋತಿ ದೇಸಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net