ಶಿಕ್ಷಣದ ಜತೆಗೆ ಸಂಸ್ಕಾರ ನೀಡಲಿ

19Hrugeri2
Published on

ಹಾರೂಗೇರಿ: ಪ್ರತಿಯೊಬ್ಬ ಮಗುವಿನಲ್ಲ್ಲೂ ಅದ್ಭುತವಾದ ಪ್ರತಿಭೆ ಅಡಗಿರುತ್ತದೆ. ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪಾಠ ಮಾಡಬೇಕು. ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಕೊಡುವುದು ಮುಖ್ಯ ಎಂದು ಮುರಗುಂಡಿ ಕ್ಲಸ್ಟರ್‌ನ ಸಿಆರ್‌ಪಿ ವಿಶುಕುಮಾರ ಮಾಳಿ ಹೇಳಿದರು.

ಪಟ್ಟಣದ ಡಾ.ರಾಮಮನೋಹರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆಯ ಕಾಳಿದಾಸ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ, ಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಹಾಗೂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಇವುಗಳ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ೨೦೨೫-೨೬ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ವನಮೋತ್ಸವ, ಪಿಯುಸಿ ಹಾಗೂ ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಪರಮಾನಂದವಾಡಿಯ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿ ಸುಖ ಅನುಭವಿಸಲಾರದೇ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕು. ಎಲ್ಲ ಸಂಪತ್ತಿಗಿಂತ ಜ್ಞಾನ ಸಂಪತ್ತು ಶ್ರೀಮಂತವಾದುದು ಎಂದರು. ಸಂಸ್ಥೆಯ ಅಧ್ಯಕ್ಷ ನಿಂಗಪ್ಪ ಚೌಗಲಾ ಅಧ್ಯಕ್ಷತೆ ವಹಿಸಿ ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

೨೦೨೪-೨೫ನೇ ಸಾಲಿನ ಬಿ.ಎ ಅಂತಿಮ ವರ್ಷದಲ್ಲಿ ಅತಿ ಹೆಚ್ಚು ಅಂಕ ಪಡೆದ ಶ್ವೇತಾ ಸೂಳೇಬಾವಿ, ಬಸವರಾಜ ಕಂಬಾರ, ಸ್ವಾತಿ ಪಾರ್ಥನಳ್ಳಿ ಹಾಗೂ ಅಕ್ಷತಾ ಬನಾಜ ಅವರನ್ನು ಸನ್ಮಾನಿಸಲಾಯಿತು.

ಆಡಳಿತಾಧಿಕಾರಿ ಎಂ.ಎನ್.ಚೌಗಲಾ, ಪ್ರಾಚಾರ್ಯ ಎಸ್.ಪಿ.ಸೈದಾಪುರ, ವೈ.ಬಿ.ಪಾಟೀಲ, ವಿ.ಎಎಲ್.ಕಂಬಾರ, ಎಸ್.ಜಿ.ರಾಯಬಾಗಕರ ಇತರರು ಇದ್ದರು. ಕನ್ನಡ ಉಪನ್ಯಾಸಕ ಟಿ.ಎಸ್.ವಂಟಗೂಡಿ ಸ್ವಾಗತಿಸಿದರು. ಎಸ್.ಟಿ. ಬದ್ನಿಕಾಯಿ ನಿರೂಪಿಸಿದರು, ಎಂ.ಬಿ.ಹೊಸಪೇಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net