ಶಿಕ್ಷಣದ ಜತೆಗೆ ಕಾಯಕಕ್ಕೆ ಮಹತ್ವ ನೀಡಿ

25_Hulsur_2
 ಹುಲಸೂರಿನ ಎಂ.ಕೆ ಪಾರಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ೨೦೨೪-೨೫ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಮತ ರೆಡ್ ಕ್ರಾಸ್ ಘಟಕವನ್ನು ಪ್ರಾಂಶುಪಾಲ ಡಾ.ಬಳಿರಾಮ ಹುಡೆ ಉದ್ಘಾಟಿಸಿದರು. ಕಾಶಿನಾಥ ಪಾರಶೆಟ್ಟಿ, ಡಾ. ಮಲ್ಲಿಕಾರ್ಜುನ ಕಾಂಬಳೆ ಇತರರಿದ್ದರು.
Published on

ಹುಲಸೂರು: ಶರಣರು ನಡದಾಡಿದ ಪಾವನ ಭೂಮಿಯಲ್ಲಿ ನಾವು ಜೀವಿಸುತ್ತಿದ್ದು, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಶರಣ ಸಂಸ್ಕೃತಿಯ ಚಿಂತನೆಗಳಾದ ಕಾಯಕ ಹಾಗೂ ದಾಸೋಹಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದು ಬಸವಕಲ್ಯಾಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಬಳಿರಾಮ ಹುಡೆ ಹೇಳಿದರು.

ಪಟ್ಟಣದ ಹೊರವಲಯದ ಎಂ.ಕೆ.ಪಾರಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಮಂಗಳವಾರ ೨೦೨೪-೨೫ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಬಿಎ, ಬಿಕಾಂ ಹಾಗೂ ಬಿಎಸ್‌ಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಮತ್ತು ಎನ್‌ಎಸ್‌ಎಸ್ ರೆಡ್ ಕ್ರಾಸ್ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿಶೇಷ ಆಸಕ್ತಿ ವಹಿಸಿ ಓದಿಗೆ ಹೆಚ್ಚು ಮಹತ್ವ ನೀಡಬೇಕು. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಕಾಂಬಳೆ ಮಾತನಾಡಿ, ವಿದ್ಯಾರ್ಥಿಗಳು ದೈಹಿಕವಾಗಿ ಸದೃಢರಾಗುವುದರ ಜತೆಗೆ ಬೌದ್ಧಿಕವಾಗಿ ವಿವಿಧ ಮೂಲಗಳಿಂದ ಜ್ಞಾನವನ್ನು ಸಂಪಾದಿಸಬೇಕು ಎಂದರು.

ಪ್ರೊ.ಕುಪೇಂದ್ರ ರಾಠೋಡ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿಗೆ ಭೂದಾನ ಮಾಡಿರುವ ಶ್ರೀ ವೀರಭದ್ರೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಾಶಿನಾಥ ಪಾರಶೆಟ್ಟಿ ಇತರರಿದ್ದರು.

ನೇಹಾ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಡಾ.ಲಕ್ಷ್ಮೀಕಾಂತ ಪಂಚಾಳ ನಿರೂಪಣೆ ಮಾಡಿದರು. ಪ್ರೊ.ನಾಗರೆಡ್ಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net