ಶಿಕ್ಷಣದ ಜತೆ ಸನ್ನಡತೆ ಅಳವಡಿಸಿಕೊಳ್ಳಿ

17ydg03
Published on


ಯಾದಗಿರಿ: ಲಿಂಗತ್ವ ಅಲ್ಪಸಂಖ್ಯಾತರು ಎಲ್ಲರಂತೆ ಸಮಾಜದಲ್ಲಿ ಗೌರವಿತವಾಗಿ ಜೀವಿಸಲು ಉತ್ತಮ ಶಿಕ್ಷಣ ಜತೆಗೆ ಒಳ್ಳೆಯ ನಡವಳಿಕೆ ಇದ್ದಾಗ ಮಾತ್ರ ಇತರರಿಗೆ ಮಾದರಿಯಾಗುತ್ತೀರಿ ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ.ಭಗವಂತ ಅನವಾರ ಸಲಹೆ ನೀಡಿದರು.

ಶನಿವಾರ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಕಾಮಿಕ್ ಪುಸ್ತಕ ಬಿಡುಗಡೆ ಹಾಗೂ ಲೈಂಗಿಕ, ಸಂತಾನೋತ್ಪತ್ತಿ ಆರೋಗ್ಯ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಎಲ್ಲರ ಜತೆ ನೀವು ಸಮಾನವಾಗಿ ಜೀವಿಸಬೇಕು ನಿಮ್ಮಲ್ಲಿ ಕೀಳುರಿಮೆ ಇರಬಾರದು. ಸ್ವಾಭಿಮಾನದಿಂದ ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದರು.

ಭೂನ್ಯಾಯ ಮಂಡಳಿ ಸದಸ್ಯೆ ಪರಿಮಳ ರಾಜಶೇಖರ ಮಾತನಾಡಿ, ಲೈಂಗಿಕ ಅಲ್ಪಸಂಖ್ಯಾತರು ಎಂದರೆ ಕೆಲವು ಸಂದರ್ಭಗಳಲ್ಲಿ ಕೆಟ್ಟ ರೀತಿಯಿಂದ ಕಾಣಲಾಗುತ್ತದೆ. ಎಂದು ನಿವು ಹೇಳುವುದು ತಪ್ಪು. ಅದನ್ನು ನೀವೇ ಬೇರು ಸಮೇತವಾಗಿ ಕಿತ್ತಿ ಎಸೆಯಲು ಬದಲಾವಣೆ ಮಾಡಿಕೊಳ್ಳಬೇಕು. ಇಂದು ಕಾಲ ಬದಲಾಗಿದೆ. ನಿಮ್ಮಲ್ಲಿ ಸಾಕಷ್ಟು ಜನ ಸಕರ್ಾರಿ ನೌಕರರಾಗುತ್ತಿದ್ದಾರೆ. ಗುರಿ ಮುಟ್ಟುವ ಛಲ ಬಿಡಕೂಡದು ಎಂದು ಕಿವಿಮಾತು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net