ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ತಂತ್ರಜ್ಞಾನ ಅಗತ್ಯ

ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ತಂತ್ರಜ್ಞಾನ ಅಗತ್ಯ
Published on

ಚನ್ನರಾಯಪಟ್ಟಣ: ಗ್ರಾಮೀಣ ಸರ್ಕಾರಿ ಶಾಲೆಗಳಿಗೆ ಆಧುನಿಕ ತಂತ್ರಜ್ಞಾನದ ಪರಿಕರಗಳನ್ನು ನೀಡುವ ಮೂಲಕ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಬೇಕು ಎಂದು ಐಡಿಎಫ್ ಸಿ ಸಂಸ್ಥೆಯ ರಾಜ್ಯ ಮುಖ್ಯಸ್ಥ ಎಚ್.ಎನ್. ಪುಟ್ಟಸ್ವಾಮಿ ಹೇಳಿದರು.

  ತಾಲೂಕಿನ ಹಿರೀಸಾವೆ ಗ್ರಾಮದ ಎಸ್ಎನ್ಎಚ್ಸಿಎಸ್ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಐಡಿಎಫ್ ಸಿ ವತಿಯಿಂದ ಶುಕ್ರವಾರ ಒಂದುವರೆ ಲಕ್ಷ ಬೆಲೆಯ ಸ್ಮಾರ್ಟ್ ಬೋರ್ಡ್ ಅನ್ನು ನೀಡಿ, ಅವರು ಮಾತನಾಡಿದರು.

  ತಾಂತ್ರಿಕತೆ ಇಲ್ಲದೆ ಮುಂದಿನ ಜೀವನ ನಡೆಯುವುದು ಕಷ್ಟ.   ವಿದ್ಯಾರ್ಥಿಗಳು ಪದವಿ ಜೊತೆಯಲ್ಲಿ ಕೌಶಲ್ಯವನ್ನು ಬೆಳೆಸಿಕೊಳ್ಳವುದು ಒಳಿತು. ಶಿಕ್ಷಣದಲ್ಲಿ ತಂತ್ರಜ್ಞಾನ ಬಹಳ ಮುಖ್ಯವಾಗಿದೆ ಎಂದರು.

  ಬರೆದು ಕಲಿಯುವ ಶಿಕ್ಷಣ ಪದ್ದತಿಯ ಬದಲು, ವೀಕ್ಷಣೆ ಮತ್ತು ಪ್ರಯೋಗ ಮಾಡಿ ಕಲಿಯುವ ಶಿಕ್ಷಣ ಪದ್ದತಿ ಬಂದಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಸಾಮಾಜಿಕ ಚಟುವಟಿಕೆಯ ಕಾರ್ಯಕ್ರಮದಲ್ಲಿ ಈ ಕಾಲೇಜಿಗೆ ಸ್ಮಾರ್ಟ್ ಬೋರ್ಡ್ ನೀಡಲಾಗಿದೆ ಎಂದು ತಿಳಿಸಿದರು.

  ಹೋಬಳಿ ಕಸಾಪ ಅಧ್ಯಕ್ಷ ಪ್ರಮೋದ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀಧರ್, ಐಡಿಎಫ್ಸಿ ಸಂಸ್ಥೆಯ ಮುಖ್ಯಸ್ಥರಾದ ಶ್ರೀಕಾಂತಪ್ರಸಾದ್ ಮಾತನಾಡಿದರು. ಕಾಲೇಜಿ ಪ್ರಭಾರಿ ಪ್ರಾಂಶುಪಾಲ ಆಶೋಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಜನಿಕಾಂತ್, ಕಾಂತರಾಜು, ಮಧು, ಎಎಸ್ಐ ಸುಬ್ರಹ್ಮಣ್ಯ, ಉಪನ್ಯಾಸಕರಾದ ರಾಮಕೃಷ್ಣ, ಡಾ. ಲೋಕೇಶ್, ವೇಣುಗೋಪಾಲ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net