ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ

08-CRP-05
ಚನ್ನರಾಯಪಟ್ಟಣ ತಾಲೂಕು ಮೂಡನಹಳ್ಳಿ ಗ್ರಾಮದ ಶ್ರೀ ಈಶ್ವರ ದೇವಸ್ಥಾನದಲ್ಲಿ ಗುರುವಾರ ಉಪನಯನ ದೀಕ್ಷಾ ಕಾರ್ಯಕ್ರಮ ನಡೆಯಿತು. ಪ್ರೊ.ಎಂ.ಮಲ್ಲಣ್ಣ, ಪರಶಿವಮೂರ್ತಿ, ರುದ್ರಮೂರ್ತಿ, ಕುಮಾರ್, ಮಂಜುನಾಥ್ ಇದ್ದರು.
Published on

ಚನ್ನರಾಯಪಟ್ಟಣ: ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನ ಸಂಪಾದನೆ ಅಗತ್ಯವಾಗಿದ್ದು, ಮಕ್ಕಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಾ ರಾಣಿ ಹೇಳಿದರು.

ತಾಲೂಕಿನ ಮೂಡನಹಳ್ಳಿ ಗ್ರಾಮದ ಈಶ್ವರ ದೇಗುಲದಲ್ಲಿ ಹಾಸನ ಜಿಲ್ಲಾ ಶಿವಾರ್ಚಕ ಸಂಘದಿಂದ ಗುರುವಾರ ಹಮ್ಮಿಕೊಂಡಿದ್ದ ಉಪನಯನ ದೀಕ್ಷಾ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಕ್ಷೇತ್ರದಲ್ಲಿ ಶಾಸಕ ಬಾಲಕೃಷ್ಣ ಅವರು ತಮ್ಮೆಲ್ಲರ ಸಹಕಾರದಿಂದ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದು, ಮುಂದೆಯೂ ತಮ್ಮೆಲ್ಲರ ಸಹಕಾರ, ಆಶೀರ್ವಾದ ಹೀಗೆ ಇರಲಿ ಎಂದು ಮನವಿ ಮಾಡಿದರು.

ಕತ್ತರಿಘಟ್ಟದ ಶ್ರೀ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಗುರೂಜಿ ಮಾತನಾಡಿ, ದೀಕ್ಷೆ ಪಂಚೇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಅನುಕೂಲವಾಗುತ್ತದೆ. ಪೌರೋಹಿತ್ಯ ಹಣಕ್ಕಾಗಿ ಮಾಡುವುದಲ್ಲ. ದೇವರ ಬಳಿಗೆ ಹೋಗಲು ಮಾಡುವುದು. ದೇಹಕ್ಕಿಂತಲೂ ಮೊದಲು ಮನಸ್ಸಿಗೆ ಸ್ನಾನ ಆಗಬೇಕು. ಮೊದಲು ನಾವು ಶುದ್ಧವಾಗಬೇಕು. ತದನಂತರ ಸಮಾಜವನ್ನು ಶುದ್ಧ ಮಾಡಲು ಹೋಗಬೇಕು ಎಂದರು.

ಕಾರ್ಯಕ್ರಮದಲ್ಲಿ 53 ಮಕ್ಕಳಿಗೆ ಶಿವದೀಕ್ಷೆ ನೀಡಲಾಯಿತು. ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕರ್ನಾಟಕ ರಾಜ್ಯ ಶಿವಾರ್ಚಕ ಸಂಘದ ಅಧ್ಯಕ್ಷ ಕೆ.ಎಂ.ನಂಜುಂಡಪ್ಪ, ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಣ್ಣ, ರಾಜ್ಯ ಸಂಘದ ನಿರ್ದೇಶಕರಾದ ಸಿಂಧುವಳ್ಳಿ ಬಸವಣ್ಣ, ಗೆರಸನಹಳ್ಳಿ ಸತೀಶ್, ಆಗಮಿಕರಾದ ಪ್ರೊ.ಎಂ.ಮಲ್ಲಣ್ಣ, ಪರಶಿವಮೂರ್ತಿ, ರುದ್ರಮೂರ್ತಿ, ಕುಮಾರ್, ಮಂಜುನಾಥ್, ಎಸ್.ಸಿ.ಮಹದೇವ ಪ್ರಸಾದ್, ತಾಲೂಕು ಮುಜರಾಯಿ ದೇವಾಲಯಗಳ ಸಂಘದ ಅಧ್ಯಕ್ಷ ಶ್ರೀಧರ್ ಮೂರ್ತಿ, ಮುಖಂಡರಾದ ಕುಮಾರಸ್ವಾಮಿ, ಪುಟ್ಟಬಸಪ್ಪ, ಹರೀಶ್ ಬಳದರೆ, ಆನೆಕೆರೆ ಪುಟ್ಟರಾಜು, ಮರಗೂರು ಯೋಗೇಶ್, ಸ್ವಾಮಿ, ರಮೇಶ್, ಗಿರೀಶ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net