ಶಿಕ್ಷಣಕ್ಕೆ ಬಡತನ, ಸಿರಿತನವೆಂಬ ಭೇದವಿಲ್ಲ

28hgr1
Published on

ಹಲಗೂರು: ಸಾಧನೆಯ ಹಾದಿಯಲ್ಲಿ ಗುರಿ ಇಟ್ಟುಕೊಂಡು ವ್ಯಾಸಂಗ ಮಾಡಿ. ಶಿಕ್ಷಣಕ್ಕೆ ಬಡತನ, ಸಿರಿತನವೆಂಬ ಭೇದ ಇರುವುದಿಲ್ಲ. ನಿಮ್ಮ ಶಿಕ್ಷಣ ಮತ್ತು ಕಲಿಕೆ ನಿಮ್ಮ ಮನಸ್ಸಿನಲ್ಲೇ ಇರುತ್ತದೆ. ಅದನ್ನು ಹೊರಹಾಕಿ ಉನ್ನತ ಶಿಕ್ಷಣ ಪಡೆಯಿರಿ ಎಂದು ನಿವೃತ್ತ ಶಿಕ್ಷಕ ತಿಮ್ಮಪ್ಪ ತಿಳಿಸಿದರು.


ಮಳವಳ್ಳಿ ತಾಲೂಕಿನ ವಿವಿಧ ಶಾಲೆಗಳಲ್ಲಿ 1 ರಿಂದ 10 ನೇ ತರಗತಿ ಓದುತ್ತಿರುವ ಅನಾಥ ಮಕ್ಕಳಿಗೆ ದಾನಿಗಳಿಂದ ಸಂಗ್ರಹಿಸಲ್ಪಟ್ಟ ಶಾಲಾ ಬ್ಯಾಗ್, ಸಮವಸ್ತ್ರ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಿ ಮಾತನಾಡುತ್ತಿದ್ದರು.


ಲಿಂಗಪಟ್ಟಣದ ಸುಂದರಪ್ಪ ಮಾತನಾಡಿ, ನಿಮ್ಮಲ್ಲಿರುವ ಅನಾಥ ಭಾವನೆಯನ್ನು ಮನಸ್ಸಿನಿಂದ ತೆಗೆದು ಹಾಕಿ. ಶಿಕ್ಷಣದ ಕಡೆ ಹೆಚ್ಚು ಒತ್ತು ಕೊಡಿ. ನಿಮಗೆ ಅಗತ್ಯ ಕಲಿಕಾ ಸಾಮಾಗ್ರಿಗಳು, ಬಟ್ಟೆ, ಬ್ಯಾಗ್ ಹಾಗೂ ಸ್ಕೂಲ್ ಫೀಸ್ ಇನ್ನಿತರ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ದಾನಿಗಳ ಸಮೂಹ ಇದೆ. ಛಲ ಬಿಡದೆ ನಿಮ್ಮ ಜೀವನದ ಗುರಿಯನ್ನು ಸಾಧಿಸುವ ಮೂಲಕ ಓದಿದ ಶಾಲೆಗೂ ಹಾಗೂ ಗ್ರಾಮಕ್ಕೂ ಕೀರ್ತಿ ತನ್ನಿ ಎಂದರು.


ದಂತ ವೈದ್ಯ ಅರುಣ್ ಕುಮಾರ್, ನಿವೃತ್ತಿ ಶಿಕ್ಷಕ ಎ.ಎಸ್. ದೇವರಾಜು ಮಾತನಾಡಿದರು. ಎ.ಎಸ್.ದೇವರಾಜು, ಡಾ.ನಾಗೇಶ್, ಮಲ್ಲಿಕಾರ್ಜುನ, ಶಿವಣ್ಣ, ಅಭಿ, ಕೃಷ್ಣಪ್ಪ, ಮಂಗಳಮ್ಮ, ಬೋರೇಗೌಡ, ಸುರೇಶ್, ಇಸ್ರತ್ ಬೇಗಂ ಹಾಗೂ ಕೆ.ಪಿ.ಎಸ್. ಶಾಲೆಯ ಮುಖ್ಯ ಶಿಕ್ಷಕ ಕುಳ್ಳಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net