ಶಿಕ್ಷಣಕ್ಕೆ ಒತ್ತು ನೀಡಲು ಸಂಕಲ್ಪ ಮಾಡಿ

15BK1 A
ಬಸವಕಲ್ಯಾಣದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ರಾತ್ರಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವವನ್ನು ಸಂಸದ ಸಾಗರ ಖಂಡ್ರೆ ಉದ್ಘಾಟಿಸಿದರು. ಸುಮೇಧ ನಾಗಸೇನ ಭಂತೆ, ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ವಿಜಯಸಿಂಗ್, ಧನರಾಜ ತಾಳಂಪಳ್ಳಿ, ರವಿ ಗಾಯಕವಾಡ, ಎಂ.ಡಿ.ಸಗೀರೋದ್ದಿನ್, ಮೀರ್‌ಅಜರಲಿ ನವರಂಗ್, ಶಹಜಹಾನ್ ಬೇಗಂ ಇತರರಿದ್ದರು.
Published on

ಬಸವಕಲ್ಯಾಣ: ಡಾ.ಬಾಬಾಸಾಹೇಬ ಅಂಬೇಡ್ಕರ್ ಶ್ರೇಷ್ಠವಾದ ಸಂವಿಧಾನ ಕೊಟ್ಟಿದ್ದಾರೆ. ಇದರಿಂದಾಗಿ ದೇಶದಲ್ಲಿ ಪ್ರಜಾಪ್ರಭುತ್ವ ಶುಭದ್ರವಾಗಿದೆ. ಸಂವಿಧಾನದಲ್ಲಿನ ಹಕ್ಕುಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕೆಂದು ಸಂಸದ ಸಾಗರ ಖಂಡ್ರೆ ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಅರ್ಬನ್ ಯುಥ್ ಕ್ಲಬ್, ಭಾರತೀಯ ದಲಿತ ಪ್ಯಾಂಥರ್ ತಾಲೂಕು ಘಟಕ ಹಾಗೂ ಭೀಮ ನಗರ ಪಂಚ ಕಮಿಟಿ ಸಹಯೋಗದಲ್ಲಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ರಾತ್ರಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೪ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಡಾ.ಅಂಬೇಡ್ಕರ್ ಅವರ ಕನಸು ಸಾಕಾರ ಮಾಡಲು ಎಲ್ಲರೂ ಶಿಕ್ಷಣಕ್ಕೆ ಒತ್ತು ನೀಡಲು ಸಂಕಲ್ಪ ಮಾಡಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಎಂಎಲ್ಸಿ ವಿಜಯಸಿಂಗ್ ಮಾತನಾಡಿ, ಭಾರತಕ್ಕೆ ವಿಶ್ವದಲ್ಲಿ ಶ್ರೇಷ್ಠವಾದ ಸಂವಿಧಾನವನ್ನು ಡಾ.ಅಂಬೇಡ್ಕರ್ ನೀಡಿದ್ದಾರೆ. ಅವರನ್ನು ಜೀವನದಲ್ಲಿ ಪ್ರತಿದಿನವೂ ನೆನಪಿಸಿಕೊಳ್ಳಬೇಕು. ಅವರು ಹಾಕಿ ಕೊಟ್ಟಿರುವ ಮಾರ್ಗದಲ್ಲಿ ನಡೆಯಲು ಎಲ್ಲರೂ ಸಂಕಲ್ಪ ಮಾಡೋಣ ಎಂದರು.

ಸಾನ್ನಿಧ್ಯ ವಹಿಸಿದ್ದ ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಡಾ.ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದಾಗಿ ಇಂದು ದೇಶದಲ್ಲಿ ಎಲ್ಲರೂ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದೇವೆ. ಶಿಕಣಕ್ಕೆ ಒತ್ತು ನೀಡಿದಾಗ ಮಾತ್ರ ಪ್ರಗತಿ ಸಾದಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಬುದ್ಧಲೇಣಿ ಖರೋಸಾದ ಸುಮೇಧ ನಾಗಸೇನ ಭಂತೆ, ರಾಜಾಬಾಗ್ ಸವಾರ ದರ್ಗಾದ ಹಜರತ್ ಖಾಜಾ ಜಿಯಾಉಲ್ ಹಸನ್ ಜಾಗೀರದಾರ್ ಸಾನ್ನಿಧ್ಯ ವಹಿಸಿದ್ದರು. ಉಜಳಂಬ(ಪುಣೆ) ಉಪನ್ಯಾಸಕಿ ರಾಜೇಶ್ವರಿ ಮೋರೆ ವಿಶೇಷ ಉಪನ್ಯಾಸ ನೀಡಿದರು.

ನೇತೃತ್ವ ವಹಿಸಿದ್ದ ಭಾರತೀಯ ದಲಿತ ಪ್ಯಾಂಥರ್ ತಾಲೂಕು ಅಧ್ಯಕ್ಷ ರವಿ ಗಾಯಕವಾಡ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಉದ್ಯಮಿ, ಕಾಂಗ್ರೆಸ್ ಮುಖಂಡ ಧನರಾಜ ತಾಳಂಪಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠ ರಾಠೋಡ್, ಪಕ್ಷದ ನಗರ ಘಟಕದ ಅಧ್ಯಕ್ಷ ಮೀರ್ ಅಜರಲಿ ನವರಂಗ್, ನಗರಸಭೆ ಅಧ್ಯಕ್ಷ ಎಂಡಿ.ಸಗಿರೋದ್ದಿನ್, ನರಸಿಂಗರಾವ ಕಾಂಬಳೆ, ಎಂಡಿ ಮಕ್ದೂಮ್ ನೀಲಂಗೆ, ನಗರಸಭೆ ಸದಸ್ಯ ಏಜಾಜ್ ಲಾತೂರೆ, ಖಲೀಲ್ ಅಹ್ಮದ್, ನಾಗನಾಥ ಗಜರೆ, ಶಿವಾಜಿ ಶಿಂಧೆ, ಅನ್ವರ ಭೋಸಗೆ, ಸಂತೋಷ ಗುತ್ತೇದಾರ್, ಓಂ ಪ್ರಕಾಶ ಪಾಟೀಲ್, ಶರಣು ಆಲಗೂಡ ಇದ್ದರು. ಉಪನ್ಯಾಸಕ ಶ್ರೀಧರ ಚಲವಾದಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net