ಶಿಕ್ಷಣಕ್ಕೆ ಒತ್ತು ಕೊಟ್ಟ ಜಯದೇವ ಸ್ವಾಮೀಜಿ

CTD MHIALA SAMAVESHA
Published on

ಚಿತ್ರದುರ್ಗ: ಮುರುೇಶನ ಶಕ್ತಿ ದೊಡ್ಡದೆಂದು ಹರಿಹರ ಶ್ರೀ ವೀರಶೈವ ಪಂಚಮಸಾಲಿ ಗುರುಪೀಠದ ಶ್ರೀ ಜಗದ್ಗುರು ವಚನಾನಂದ ಸ್ವಾಮೀಜಿ ಹೇಳಿದರು.
ಶರಣ ಸಂಸ್ಕೃತಿ ಉತ್ಸವ, ಜಯದೇವ ಶ್ರೀ 150 ನೇ ಜಯಂತ್ಯುತ್ಸವ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಮಹಿಳಾ ಸಮಾವೇಶದಲ್ಲಿ ಮಾತನಾಡಿ, ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಜಯದೇವ ಶ್ರೀಗಳು ನಾಡಿನಾದ್ಯಾಂತ ಜಯದೇವ ಪ್ರಸಾದ ನಿಲಯ, ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಿದರು. ಇಲ್ಲಿ ಓದಿದ ಲಕ್ಷಾಂತರ ಜನರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಬನಾರಸ್ ಹಿಂದು ವಿವಿಗೂ ಶ್ರೀಗಳು ನೆರವಾಗಿದ್ದರು ಎಂದರು.
ಪತ್ರಕರ್ತೆ ಎಸ್.ರಶ್ಮಿ ಮಾತನಾಡಿ, ಆಚಾರ ಎಷ್ಟು ಮುಖ್ಯವೊ ವಿಚಾರವೂ ಅಷ್ಟೇ ಮುಖ್ಯ. ವಚನ ಬದುಕು ರೂಪಿಸುತ್ತದೆ. ನಮ್ಮ ಮನಸ್ಸಿನ ಹತೋಟಿಗೆ ಮಕ್ಕಳಿಗೆ ಚಿಕ್ಕಂದಿನಿಂದ ವಚನಪ್ರಜ್ಞೆ, ಸಂಸ್ಕಾರ ಕಲಿಸಬೇಕು. ಅನ್ನದ ಬೆಲೆ ತಿಳಿಸಬೇಕು. ಯಶಸ್ಸಿಗೆ ಪರಿಶ್ರಮವೇ ಗು ಟ್ಟು. ನಾನು ಎನ್ನುವ ಬದಲು ನಾವು ಎಂಬ ಭಾವ ಮೂಡಬೇಕೆಂದರು.
ನಾಗನೂರು ಬಸವಧರ್ಮ ಪ್ರಚಾರಕ ಸಂಸ್ಥೆ ಕಾರ‌್ಯದರ್ಶಿ ಡಿ.ಪಿ.ನಿವೇದಿತಾ ಮಾತನಾಡಿ, ಬಸವಣ್ಣ ಸ್ತ್ರೀಯರ ಸಮಾನತೆ, ಸ್ವಾತಂತ್ರೃಕ್ಕೆ ಹೋರಾಡಿದ್ದವರು. ವಚನಗಾರ್ತಿಯರಿಗೆ ಪ್ರಾಶಸ್ತ್ಯ ನೀಡಿದ್ದರು. ಶರಣರು ದಾನದ ಬದಲು ದಾಸೋಹ ಸಂಸ್ಕೃತಿಯನ್ನು ಪರಿಚಯಿಸಿ ದ್ದಾರೆ ಎಂದರು.
ಶ್ರೀ ಬಸವಮೂರ್ತಿ ಮಾದಾರ ಚನ್ನ್ನಯ್ಯ ಸ್ವಾಮೀಜಿ, ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ, ಡಾ.ಶ್ರೀ ಬಸವಪ್ರಭು ಸ್ವಾಮೀಜಿ, ಡಾ.ಶ್ರೀ ಬಸವಕುಮಾರ ಸ್ವಾಮೀಜಿ, ಕಿರಣ್ ಮಾನ್ವಿ ಇದ್ದರು. ಗದಗದ ಸಚ್ಚಿದಾನಂದ ಪ್ರಭು ಅನ್ನದಾನೇಶ್ವರ ತುಪ್ಪದ, ರಾಜು ಅಜ್ಜಪ್ಪ ಮಾನ್ವಿ, ಬಿಎಲ್‌ಡಿ ವಿವಿ ಸಮಕುಲಾಧಿಪತಿ ಡಾ. ವೈ.ಜಯರಾಜ್, ಭರಮಸಾಗರದ ಶಿವಬಸಯ್ಯ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.
ಎಸ್‌ಜೆಎಂ ದಂತ ಮಹಾವಿದ್ಯಾಲಯ, ತಾಂತ್ರಿಕ ಮಹಾವಿದ್ಯಾಲಯ, ಆಂಗ್ಲ ಮಾಧ್ಯಮ ಶಾಲೆ, ಪಾಲಿಟೆಕ್ನಿಕ್, ಔಷಧೀಯ ಮಹಾವಿದ್ಯಾಲಯ, ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಭರಮಸಾಗರದ ಬಿ.ಎಸ್.ಭೂಮಿಕಾ ಮತ್ತು ಸಂಗಡಿಗರು ಸಾಂಸ್ಕೃತಿಕ ಕಾರ‌್ಯಕ್ರಮ ನಡೆಸಿಕೊಟ್ಟರು.
ಮಹಾಮಂತ್ರ
ಚಿಕ್ಕಮಗಳೂರು ಶ್ರೀ ಬಸವತತ್ವ ಪೀಠದ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಸಹಜ ಶಿವಯೋಗ ನಡೆಸಿಕೊಟ್ಟರು. ಜೇವರಗಿ ಬಸ ವಕೇಂದ್ರದ ಶ್ರೀ ಶಿವಬಸವ ಕಲ್ಲಾ ಅವರಿಗೆ ಗೌರವ ಸಮರ್ಪಿಸಲಾಯಿತು. ದಾವಣಗೆರೆ ವಿರಕ್ತ ಮಠದ ಡಾ.ಶ್ರೀ ಬಸವ ಪ್ರಭು ಸ್ವಾಮೀ ಜಿ, ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀಬಸವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಪ್ರಮಾಣ ಪತ್ರ ವಿತರಣೆ
ಬಸವ ಟಿವಿ ಸಹಯೋಗದಲ್ಲಿ ಶ್ರೀ ಮಠದ ಅಲ್ಲಮಪ್ರಭು ಸಂಶೋಧನ ಕೇಂದ್ರದಲ್ಲಿ ಏರ್ಪಡಿಸಿದ್ದ ಏಳು ದಿನಗಳ ವಚನ ಕಮ್ಮಟ ಶಿಕ್ಷ ಣ ಮಾಲಿಕೆ ತರಬೇತಿ ಶಿಬಿರ ಶುಕ್ರವಾರ ಸಮಾಪನಗೊಂಡಿತು. ಶಿಬಿರಾರ್ಥಿಗಳಿಗೆ ಬಸವ ಟಿವಿಯ ಇ.ಕೃಷ್ಣಪ್ಪ ಪ್ರಮಾಣ ಪತ್ರ ವಿತರಿಸಿದ ರು. 300 ಕ್ಕೂ ಹೆಚ್ಚು ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಸಂಗೀತ ಕಾರ‌್ಯಕ್ರಮ
ಶ್ರೀ ಮಠದ ಅನುಭವ ಮಂಟಪದಲ್ಲಿ ನಡೆದ ಸಾಂಸ್ಕೃತಿಕ ಸಂಭ್ರಮದಲ್ಲಿ ಹಿನ್ನೆಲೆ ಗಾಯಕ ರಾಜೇಶ್‌ಕೃಷ್ಣನ್ ಮತ್ತವರ ತಂಡದ ಕಲಾವಿದರು ಸಂಗೀತ ಕಾರ‌್ಯಕ್ರಮ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net