

ಕಮಲನಗರ: ಜಗತ್ತನ್ನು ಬದಲಾಯಿಸಲು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಆಯುಧವೆಂದರೆ ಶಿಕ್ಷಣ. ಇಂತಹ ಪವಿತ್ರ ಶಿಕ್ಷಣ ವೃತ್ತಿಯಿಂದ ಬಂದ ವಿಶಿಷ್ಠ ವ್ಯಕ್ತಿತ್ವದ ಶಿಕ್ಷಕರು, ಭಾರತದ ಪರಂಪರೆಯ ಹಿರಿಮೆ ಗರಿಮೆಗಳನ್ನು ಆಧುನಿಕ ವೈಜ್ಞಾನಿಕ ಪರಿಭಾಷೆಯಲ್ಲಿ ಜಗತ್ತಿಗೆ ವಿಶ್ಲೇಷಿಸಿ ಸಾರಬೇಕಾಗಿದೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟz್ದÉÃವರು ನುಡಿದರು.
ಪಟ್ಟಣದ ಡಾ.ಚನ್ನಬಸವ ಪಟ್ಟz್ದÉÃವರು ಪ್ರೌಢ ಶಾಲೆ, ಗುರಪ್ಪ ಟೊಣ್ಣೆ ಪ್ರಾಥಮಿಕ ಶಾಲೆ ಹಾಗೂ ಗುರುಕಾರುಣ್ಯ ಪಬ್ಲಿಕ್ ಶಾಲೆಯ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ದೇಶದಲ್ಲಿ ಶಿಕ್ಷಕ ವೃತ್ತಿಗೆ ತನ್ನದೇಯಾದ ಪಾವಿತ್ರÈತೆ ಇದೆ. ಶಿಕ್ಷಕರಾದವರು ಸದಾ ಅಧ್ಯಯನಶೀಲರಾಗಿರಬೇಕು. ಮಕ್ಕಳಿಗೆ ಹೊಸತನ್ನು ಕಲಿಸುವ ಮೂಲಕ ಅವರ ಜ್ಞಾನ ಹೆಚ್ಚಿಸಬೇಕು. ಸ್ವಾರ್ಥರಹಿತ ಶಿಕ್ಷಣ ನೀಡಿದಾಗ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಆಡಳಿತಾಧಿಕಾರಿ ಚನ್ನಬಸವ ಘಾಳೆ ಮಾತನಾಡಿ, ಗಡಿಭಾಗದಲ್ಲಿ ಲಿಂ.ಶ್ರೀ ಡಾ.ಚನ್ನಬಸವ ಪಟ್ಟz್ದÉÃವರ ಮಾರ್ಗದರ್ಶನದಲ್ಲಿ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟz್ದÉÃವರು ಮತ್ತು ಶ್ರೀ ಗುರುಬಸವ ಪಟ್ಟz್ದÉÃವರ ನೇತೃತ್ವದಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಜತೆಗೆ ಸಂಸ್ಕಾರಯುತ, ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿದೆ ಎಂದರು.
ಗ್ರಾಮದ ಪ್ರಮುಖ ಶಿವಾನಂದ ವಡ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಕರಡ್ಯಾಳ ಗುರುಕುಲನ ಸಂಯೋಜಕ ಶಶಿಕುಮಾರ ಕಟ್ಟೆ, ಪ್ರಶಾಂತ ರೆಡ್ಡಿ, ನಿವೃತ್ತ ಶಿಕ್ಷಕ ರಾಜೇಂದ್ರ ಬಿರಾದಾರ ಹೊರಂಡಿ, ಹಿರಿಯರಾದ ಭೀಮರಾವ ಶ್ರೀಗಿರೆ, ಪ್ರಾಂಶುಪಾಲ ಶ್ರೀಧರ ರೆಡ್ಡಿ ಇತರರಿದ್ದರು.
ಕುಮಾರಿ ಭಕ್ತಿ ಹಾಗೂ ಸಂಗಡಿಗರು ವಚನ ನೃತ್ಯ ಪ್ರಸ್ತುತಪಡಿಸಿದರು. ಕುಮಾರ ಪ್ರಥಮೇಶ ಮಾಧವರಾವ ಸ್ವಾಗತಿಸಿದರು. ವೈಷ್ಣವಿ ಶಿವಕುಮಾರ ಹಾಗೂ ಮಾನಸಿ ವಿಕಾಸ ನಿರೂಪಣೆ ಮಾಡಿದರು. ಲಕ್ಷ್ಮೀ ಪಾಂಡುರAಗ ವಂದಿಸಿದರು.
ನಾಡೋಜ ಡಾ. ಬಸವಲಿಂಗ ಪಟ್ಟz್ದÉÃವರಿಗೆ 41 ವಿಧದ ಪುಷ್ಪಗಳಿಂದ ಪಾದಪೂಜೆ ನೆರವೇರಿಸಲಾಯಿತು. ಕಮಲನಗರ ತಾಲೂಕು ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು.