

ಚಿತ್ರದುರ್ಗ: ನಗರದ ಶ್ರೀ ಅಹೋಬಲ ಟಿವಿಎಸ್ ಶೋ ರೂಂ.ನಲ್ಲಿ ಮಂಗಳವಾರ ಸ್ವಾತಂತ್ರ್ಯದಿನವನ್ನು ಆಚರಿಸಲಾಯಿತು. ವೇದಾಂತ ಆಸ್ಪತ್ರೆ ಡಾ.ತೇಜಸ್ವಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಶಿಕ್ಷಣ,ಆರೋಗ್ಯ ವ್ಯವಸ್ಥೆಗಳ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಿದರೆ ದೇಶ ಅಭಿವೃದ್ಧಿ ಸಾಧ್ಯವಾಗಲಿದೆ. ಉದ್ಯೋಗ ಸೃಷ್ಟಿಗೆ ಒತ್ತು ನೀಡ ಬೇಕಿದೆ ಎಂದು ಅವರು ಹೇಳಿದರು.
ಉಪನ್ಯಾಸಕ ವಿಶ್ವನಾಥ್ ಮಾತನಾಡಿ,ಸಹಬಾಳ್ವೆಯ ಬದುಕು ನಮ್ಮದಾಗ ಬೇಕಿದೆ ಎಂದರು. ಶೋರೂಂ.ಮಾಲೀಕ ಪಿ.ವಿ.ಅರುಣ್ ಮಾತನಾಡಿ,ಜಾತಿ ಪದ್ಧತಿ ನಿರ್ಮೂಲನೆಯಾಗಬೇಕು. ಬಡ,ಮಧ್ಯಮ ವರ್ಗದವರ ಆರ್ಥಿಕಾಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯಸರ್ಕಾರ ಗಳು ಗಮನ ಹರಿಸಬೇಕಿದೆ ಎಂದರು. ಶೋರೂಂ.ಜನರಲ್ ಮ್ಯಾನೇಜರ್‌ವಿದ್ಯಾಧರ, ಸೇಲ್ಸ್ ಮ್ಯಾನೇಜರ್‌ರವಿ,ಸಾಧಿಕ್,ಶ್ರೀನಿವಾಸ್,ಬ್ಯಾಂಕ್ ಕಾಲನಿ ಮೋಹನ್,ಎಸ್.ಪಿ.ಮಂಜುಳಾ ಮತ್ತಿತರರು ಇದ್ದರು.
ಪುಣ್ಯಭೂಮಿಯಲ್ಲಿ ಸ್ವಾತಂತ್ರೃ ದಿನಾಚರಣೆ
ಚಿತ್ರದುರ್ಗ:ನಗರದ ಹೊರವಲಯ ಸೀಬಾರದ ಎಸ್.ನಿಜಲಿಂಗಪ್ಪ ಅವರ ಸ್ಮಾರಕ ಪುಣ್ಯಭೂಮಿಯಲ್ಲಿ ಮಂಗಳವಾರ ಸ್ವಾ ತಂತ್ರೃ ದಿನವನ್ನು ಆಚರಿಸಲಾಯಿತು. ಎಂ.ಕೆ.ಹಟ್ಟಿ ಗ್ರಾಪಂ ಅಧ್ಯಕ್ಷ ಚಂದ್ರಣ್ಣ,ಉಪಾಧ್ಯಕ್ಷೆ ರೇಶ್ಮಾಬಾನು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಗ್ರಾಪಂಸದಸ್ಯರು,ಎಸ್‌ಎನ್ ಸ್ಮಾರಕ ಟ್ರಸ್ಟ್ ಕಾರ‌್ಯದರ್ಶಿ ಹನುಮಂತಪ್ಪ,ಎಸ್.ಷಣ್ಮುಖಪ್ಪ,ಜಿ.ಎಸ್.ಉಜ್ಜಿನಪ್ಪ, ಮಹಡಿ ಶಿವಮೂರ್ತಿ, ಆ ರತಿ ಶಿವಮೂರ್ತಿ.ಅನಿಲ್ಕುಮಾರ್,ಪ್ರಕಾಶ್,ಗುರುಬಸವರಾಜ್,ಜಯದೇವಮೂರ್ತಿ,ಸೀಬಾರ,ಗುತ್ತಿನಾಡು ಗ್ರಾಮಸ್ಥರು ಇದ್ದರು.