ಶಿಕ್ಷಣ ಸಚಿವರು ಕಟ್ಟಿಂಗ್ ಮಾಡಿಸಿಕೊಳ್ಳಲಿ

vvvv
Published on

ಚಿತ್ರದುರ್ಗ: ಮೊದಲು ಕಟಿಂಗ್ ಮಾಡಿಸಿಕೊಳ್ಳುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಲಹೆ ನೀಡಿದರು. ಶನಿವಾರ ನಗರದಲ್ಲಿ ಏರ್ಪಡಿಸಿದ್ದ ಎಂಎಲ್ಸಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಸಚಿವರು, ಕಟ್ಟಿಂಗ್ ಮಾಡಿಕೊಂಡು ನೀಟಾಗಿ ತಲೆ ಬಾಚಿಕೊಳ್ಳಲಿ, ಸಚಿವರಿನ್ನೂ ತಾವು ಸಿನಿಮಾರಂಗದಲ್ಲಿ ಇದ್ದೇನೆಂದು ಭಾವಿಸಿರಬೇಕೆಂದು ವ್ಯಂಗ್ಯವಾಡಿದರು.
ಎಂಎಲ್‌ಸಿ ಕೆ.ಎಸ್.ನವೀನ್ ಮಾತನಾಡಿ, ಸಿದ್ದರಾಮಯ್ಯ ಮೊದಲು ಶಾಸಕರಾಗಿ ಆಯ್ಕೆಯಾಗಿದ್ದಾಗ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದರು. ಆದರೆ, ಈಗ ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವ ವೇಳೆಯಲ್ಲಿ, ಕನ್ನಡದ ಗೊತ್ತಿಲ್ಲದವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net