ಶಿಕ್ಷಣ ಸಂಸ್ಥೆಗಳು ಸಮಾಜಮುಖಿ ಕಾರ್ಯ ಮಾಡಲಿ

17 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಿಕ್ಷಣ ಸಂಸ್ಥೆಗಳು ಕೇವಲ ಶಿಕ್ಷಣಕ್ಕೆ ಒತ್ತು ಕೊಡದೆ ಸಮಾಜದ ಏಳಿಗೆಗೆ ಶ್ರಮಿಸಬೇಕು. ಬಡ ಜನರ ಉದ್ದಾರಕ್ಕೆ ಕಾರ್ಯಕ್ರಮ ಹಮ್ಮಿಕೊಂಡು ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕ್ರಮಕೈಗೊಂಡಾಗಲೇ ನಮ್ಮ ಸುತ್ತಲಿನ ಸಮಾಜ ಸಮೃದ್ಧವಾಗಿಡಲು ಸಾಧ್ಯ ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತಪ್ರಸಾದ ಹೇಳಿದರು.
ಡಾ. ಡಿ. ವೀರೇಂದ ಹೆಗ್ಗಡೆ ಜನ್ಮದಿನ ಹಾಗೂ ಜೆಎಸ್‌ಎಸ್‌ನ ಸುವರ್ಣ ಮಹೋತ್ಸವ ನಿಮಿತ್ತ ಜೆಎಸ್‌ಎಸ್ ಹಾಗೂ ರ‌್ಯಾಪಿಡ್ ಸಂಸ್ಥೆ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಕೇಕ್, ಕುಕ್ಕೀಸ್ ಮತ್ತು ಚಾಕಲೇಟ್ ತಯಾರಿಕೆ ಕುರಿತ ಸ್ವ-ಉದ್ಯೋಗ ತರಬೇತಿ ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ಎಷ್ಟೋ ಮಹಿಳೆಯರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅಂತಹವರಿಗೆ ಜೀವನೋಪಾಯ ಕಲ್ಪಿಸಿಕೊಡುವುದು ತರಬೇತಿ ಉದ್ದೇಶ. ಮಹಿಳೆಯರು ತಮ್ಮ ಬಿಡುವಿನ ಸಮಯದಲ್ಲಿ ಮನೆಯಲ್ಲೇ ಕುಳಿತು ಇಂತಹ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡಬಹುದು. ಮಹಿಳೆಯರ ಶ್ರೇಯೋಭಿವೃದ್ಧಿಗೆ ಹೊಲಿಗೆ, ಕಸೂತಿ, ಮಹಿಳೆಯರಿಗೆ ಉದ್ಯೋಗ ಮೇಳ ಆಯೋಜಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ವಿವಿಧ ತರಬೇತಿಗಳನ್ನು ಆಯೋಜಿಸಲಿದ್ದೇವೆ ಎಂದರು.
ರ‌್ಯಾಪಿಡ್ ಸಂಸ್ಥೆ ಮುಖ್ಯಸ್ಥೆ ಮಾಳವಿಕಾ ಕಡಕೋಳ ಮಾತನಾಡಿ, ಮಹಿಳಾ ಸಬಲೀಕರಣ ರಾಪಿಡ್ ಸಂಸ್ಥೆ ಮೂಲ ಉದ್ದೇಶ. ಇಂದು ತಾವು ಕಲಿತ ತರಬೇತಿ ಪ್ರಮಾಣಪತ್ರಕ್ಕೆ ಮಾತ್ರ ಸೀಮಿತವಾಗದೆ ಮನೆಯಲ್ಲಿ ಬಿಡುವಿನ ಸಮಯದಲ್ಲಿ ತಾವು ತಯಾರಿಸುವ ವಸ್ತು ಹಾಗೂ ಪದಾರ್ಥಗಳನ್ನು ರ‌್ಯಾಪಿಡ್ ಸಂಸ್ಥೆ ಪ್ರತಿ ವಾರ ನಡೆಸುವ ಬಜಾರಿನಲ್ಲಿ ತಂದು ಮಾರಾಟಮಾಡಬಹುದು. ಇಂದರಿಂದ ನಿಮಗೆ ಆರ್ಥಿಕ ಗಳಿಕೆಯೂ ಆಗುತ್ತದೆ ಎಂದರು.
ಮಹಾವೀರ ಉಪಾಧ್ಯೆ ಮಾತನಾಡಿದರು. ಸ್ನೇಹಾ ದೇಶಪಾಂಡೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net