

ಕಲಬುರಗಿ: ಕಾಂಗ್ರೆಸ್ ಮತ್ತು ಶಿಕ್ಷಣಕ್ಕೆ ಆಗಿ ಬರುವುದಿಲ್ಲ. ಕಾಂಗ್ರೆಸ್ ಸರ್ಕಾರ ಬಂದಾಗ ಶಿಕ್ಷಣ ಕೆಳಮಟ್ಟಕ್ಕೆ ಹೋಗುತ್ತದೆ. ಗುಲಾಮಿತನದ ಮೆಕಾಲೆ ಶಿಕ್ಷಣ ಪದ್ಧತಿ ತೆಗೆದು ಬಿಜೆಪಿ ಎನ್‌ಇಪಿ ಜಾರಿ ಮಾಡಿತ್ತು. ಅದನ್ನು ಪ್ರಸ್ತುತ ರದ್ದು ಮಾಡಿದ್ದು, ಇಡೀ ಶಿಕ್ಷಣ ವ್ಯವಸ್ಥೆಯನ್ನು ಕಾಂಗ್ರೆಸ್ ಸರ್ಕಾರ ಹದಗೆಡಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ನಗರದ ಹಿಂಗುಲಾAಬಿಕಾ ಆಯುರ್ವೇದಿಕ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಧಾನ ಪರಿಷತ್ ಈಶಾನ್ಯ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ಕನ್ನಡ e್ಞÁನ ಇಲ್ಲದ ಸಚಿವ ಶಿಕ್ಷಣ ಇಲಾಖೆಯನ್ನು, ಶಿಕ್ಷಣ ವ್ಯವಸ್ಥೆಯನ್ನು ಗೊಂದಲದ ಗೂಡು ಮಾಡಿದ್ದಾನೆ. ಎಸ್ಸೆಸ್ಸೆಲ್ಸಿಯಲ್ಲಿ ಗ್ರೇಸ್ ಮಾಕ್ಸ್, ಮೂರು ಪರೀಕ್ಷೆ, ೫, ೬, ೯ ಪರೀಕ್ಷೆ ಫಲಿತಾಂಶವಿಲ್ಲದೆ ಎಲ್ಲರೂ ಪಾಸ್ ಎನ್ನುವುದು ಸೇರಿ ಇಡೀ ವ್ಯವಸ್ಥೆಯನ್ನು ಹಾಳುಗೆಡವಿದ್ದಾರೆ. ಹೀಗೆ ಮುಂದುವರಿದರೆ ಕರ್ನಾಟಕ ಶಿP್ಷÀಣದಿಂದ ವಂಚಿತವಾಗಲಿದೆ ಎಂದರು.
ಸAಸದ ಡಾ.ಉಮೇಶ ಜಾಧವ್, ಶಾಸಕರಾದ ಬಸವರಾಜ ಮತ್ತಿಮಡು, ಡಾ.ಅವಿನಾಶ ಜಾಧವ್, ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ.ಪಾಟೀಲ್, ಶಶೀಲ ನಮೋಶಿ, ಸುನೀಲ ವಲ್ಯಾಪುರೆ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರz್ದೆÃವಾಡಗಿ, ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಕೆಕೆಆರ್‌ಡಿಬಿ ಮಾಜಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ, ಪ್ರಮುಖರಾದ ಸುರೇಶ ಸಜ್ಜನ್, ಡಾ.ಸುಧಾ ಹಾಲಕಾಯಿ, ಶಶಿಕಾಂತ ಬುಲಬುಲೆ, ಡಾ.ಇಂದಿರಾ ಲೋಯಾ, ವಿದ್ಯಾಸಾಗರ ಕುಲ್ಕರ್ಣಿ ಇತರರಿದ್ದರು.