

ಹಾಸನ: ಶಿಕ್ಷಣ ಮತ್ತು ಕ್ರೀಡೆಗೆ ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸುವ ಶಕ್ತಿ ಇದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರವಿಕಾಂತ್ ತಿಳಿಸಿದರು .
ನಗರದ ನೆಹರು ಯುವ ಕೇಂದ್ರ ಹಾಗೂ ನ್ಯಾಷನಲ್ ಶೋಟಾಕಾನ್ ಕರಾಟೆ, ಮಲ್ಟಿಪರ್ಪಸ್ ಫೆಡರೇಶನ್ ಸಹಯೋಗದಲ್ಲಿ ಭಾನುವಾರ ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ಹೇಮಾವತಿ ಕನ್ವೆನ್ಷನಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕರಾಟೆ ಕಲರ್ ಬೆಲ್ಟ್ ಪರೀಕ್ಷೆ ಮತ್ತು ಅವಾಡಿರ್ಂಗ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳು ನಮ್ಮ ನಾಡಿನ ಯುವ ಸಂಪತ್ತು . ದೈಹಿಕ ಸದೃಢತೆಗೆ ಮತ್ತು ಮಾನಸಿಕ ಸ್ಥಿರತೆಗೆ ಕರಾಟೆ ಕಲೆ ಮಹತ್ತರವಾದ ಪಾತ್ರ ವಹಿಸುತ್ತದೆ ಎಂದರು.
ಪೋಷಕರು ಮಕ್ಕಳ ಶಿಕ್ಷಣದ ಜೊತೆಗೆ ವಿವಿಧ ರೀತಿಯ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವ ಜವಾಬ್ದಾರಿ ನಿಮ್ಮದಾಗಿದೆ ಎಂದು ಪೋಷಕರಿಗೆ ಸಲಹೆ ನೀಡಿದರು ಹಾಗೂ ಕರಾಟೆಯು ಸ್ವಯಂ ರಕ್ಷಣೆಗೆ ಅನುಕೂಲಕರ ಕಲೆಯಾಗಿದೆ ವಿದ್ಯಾರ್ಥಿಗಳು ತಪ್ಪದೆ ಈ ಕಲೆಯನ್ನು ರೂಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ನ್ಯಾಷನಲ್ ಶೋಟೊ ಖಾನ್ ಕರಾಟೆ ಮಲ್ಟಿ ಪರ್ಪಸ್ ಫೆಡರೇಷನ್ ಅಧ್ಯಕ್ಷ ಕೆ.ಜಿ. ಅನಂತ್ ಕುಮಾರ್ ಮಾತನಾಡಿ,ನಮ್ಮ ಸಂಸ್ಥೆಯ ಮೂಲಕ ಸಾವಿರಾರು ಮಕ್ಕಳಿಗೆ ಕರಾಟೆ ತರಬೇತಿ ನೀಡಿ ರಾಜ್ಯ ಮತ್ತು ರಾಷ್ಟ್ರ ಹಾಗೂ ಅಂತರಾಷ್ಟೀಯ ಮಟ್ಟದಲ್ಲಿ ಭಾಗವಹಿಸಿ ಕೀರ್ತಿ ತಂದಿದ್ದಾರೆಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ದಿ ಸ್ಕಾಲರ್ಸ್ ವರ್ಡ್ ಶಾಲೆಯ ಶರತ್, ನಾಗರಾಜು, ತರಬೇತುದಾರರಾದ ತೇಜಸ್ವಿ, ಪೃಥ್ವಿರಾಜ್, ಗಣೇಶ್, ಲೋಕೇಶ್, ಪರಮೇಶ್, ಅಬ್ರಹರ್, ಚರಣ್, ವಿಶ್ವನಗೌಡ, ಸುಮಂತ್, ಸೌಮ್ಯ ಶ್ರೀ ಹಾಜರಿದ್ದರು
ಈ ಸಂದರ್ಭದಲ್ಲಿ ನೂರಾರು ಕರಾಟೆ ಪಟುಗಳಿಗೆ ವಿವಿಧ ರೀತಿಯ ಕಲರ್ ಬೆಲ್ಟ್ ಗಳ ಪ್ರಧಾನ ಮಾಡಲಾಯಿತು.