

ಸಂಕೇಶ್ವರ: ವಿದ್ಯಾರ್ಥಿಗಳು ಚೆನ್ನಾಗಿ ಓದಿ ಶೆಣಿಕ ಪ್ರಗತಿ ಸಾಧಿಸುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು. ಶಿಣ ಭವಿಷ್ಯದ ದಾರಿದೀಪ ಎಂದು ಡಾ. ಗುರುದೇವಿ ಹುಲ್ಲೆಪ್ಪನವರಮಠ ಹೇಳಿದರು.
ಸಮೀಪದ ನಿಡಸೋಸಿ ಎಸ್ಜೆಪಿಎನ್ ಟ್ರಸ್ಟ್ ಬಿಸಿಎ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿ, ಶಿಣ ಸರ್ವತೋಮುಖ ಅಭಿವೃದ್ಧಿಗೆ ಮೂಲ ಅಸ್ತ್ರ ಎಂದರು.
ಕಾಲೇಜಿನ ಹಳೆ ವಿದ್ಯಾರ್ಥಿ, ಅಭಿಯಂತ ನದೀಮ ಮಕಾಂದರ ಮಾತನಾಡಿ, ಹೆಚ್ಚಿನ ಅಧ್ಯಯನ ಮತ್ತು ವಿಷಯಗಳ ಬಗ್ಗೆ ಆಳ ಜ್ಞಾನ ಹೊಂದಿರುವುದು ಅವಶ್ಯ ಎಂದರು.
ಸಂಸ್ಥೆಯ ನಿರ್ದೇಶಕ ಬಿ.ಎಲ್. ಖೋತ ಅಧ್ಯತೆ ವಹಿಸಿದ್ದರು. ಪ್ರಾಚಾರ್ಯ ಬಸವರಾಜ ಹಾಲಬಾವಿ ಮಾತನಾಡಿದರು. ನಿಡಸೋಸಿ ಸಿದ್ಧ ಸಂಸ್ಥಾನ ಮಠದ ಉತ್ತರಾಧಿಕಾರಿ ನಿಜಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕ್ರೀಡೆ ಹಾಗೂ ಸಾಂಸತಿಕ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆದರ್ಶ ವಿದ್ಯಾರ್ಥಿ &ಪ್ರಣವ ಚೌಗುಲೆ, ಆದರ್ಶ ವಿದ್ಯಾರ್ಥಿನಿ ಸಾನಿಕ ಖೋತ ಅವರನ್ನು ಸತ್ಕರಿಸಲಾಯಿತು.
ವಿ.ಎಂ. ಮಠಪತಿ, ವಿ.ಎಂ. ಪಾಟೀಲ, ಸಿ.ಎಂ.ಸಾರಪೊರೆ, ರಾಜು ವಠಾರೆ, ಸಂತೋಷ ಖೋತ, ಆನಂದ ಸೋನಾರ್, ಮಹೇಶ ಗೌಡಪಾಟೀಲ, ಪವನ ಹಿರೇಮಠ, ಅಯ ಪಾಟೀಲ, ಶಿಲ್ಪಾ ಗಾವಡೆ, ಸೀಮಾ ನಾಯಕ, ಕವಿತಾ ಚವ್ಹಾಣ, ವಿದ್ಯಾಶ್ರೀ ಕಳಸಗೊಂಡಾ, ರಾಜಶ್ರೀ ಕಮತಗಿ, ಸಲೋನಿ, ರೂಪಾ ಪಾಟೀಲ, ದಾಾಯಿಣಿ ಹಿರೇಕೊಡಿ, ಕೀರ್ತನಾ ದೇವರ, ಶ್ರವಣಾ ಕತ್ತಿ ಇತರರು ಇದ್ದರು.