

ಚಿತ್ರದುರ್ಗ: ಜಿಲ್ಲಾ ಸಹಕಾರ ಯೂನಿಯನ್ 62ನೇ ವಾರ್ಷಿಕ ಮಹಾಸಭೆ ನಗರದ ಜೆಎಂ ಕಂಫರ್ಟ್ಸ್ ಸಭಾಂಗಣದಲ್ಲಿ ಈಚೆಗೆ ನಡೆಯಿತು.
ಯೂನಿಯನ್ ಅಧ್ಯಕ್ಷ ಎಚ್.ಎಂ. ದ್ಯಾಮಣ್ಣ ಕೋಗುಂಡೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಚ್.ವಿ. ಪ್ರತಾಪಸಿಂಹ, ನಿರ್ದೇಶಕರಾದ ಜಿಂಕಲು ಬಸವರಾಜ್, ಮಾತೃಶ್ರೀ ಮಂಜುನಾಥ್, ಜಿ.ಇ. ಅಜ್ಜಪ್ಪ, ಜಿ.ಬಿ. ಶೇಖರಪ್ಪ, ಎ. ಚನ್ನಬಸಪ್ಪ, ಜಿ.ಎನ್. ಹರೀಶ್, ಕೆ.ಆರ್. ಜಗನ್ನಾಥ್, ಪ್ರಭಾವತಿ ಹಾಗೂ ಕೆ. ಜಗ್ಗಣ್ಣ ಇತರರು ಇದ್ದರು.
2024-25ನೇ ಸಾಲಿನಲ್ಲಿ ಅತಿ ಹೆಚ್ಚು ಸಹಕಾರ ಶಿಕ್ಷಣ ನಿಧಿ ಪಾವತಿಸಿದ ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಎಸ್‌ಜೆಎಂ ಪತ್ತಿನ ಸಹಕಾರ ಸಂಘ, ಚಿತ್ರದುರ್ಗ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ, ಕಡ್ಲೆಗುದ್ದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಧರ್ಮಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳನ್ನು ಗೌರವಿಸಲಾಯಿತು. ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಶ್ರೀ ಪಿ. ಹುನಗುಂದ ನಿರೂಪಿಸಿದರು.