ಶಿಕ್ಷಣ ಕ್ಷೇತ್ರದಲ್ಲಿ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ ಛಾಪು : ಅತ್ಯುತ್ತಮ ಪ್ಲೇಸ್‌ಮೆಂಟ್‌ಗೆ ಹೆಸರುವಾಸಿ

download
Published on

ಮೈಸೂರು : ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಳವಾಡಿಯಲ್ಲಿರುವ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ ಕಳೆದ 17 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ತನ್ನದೆಯಾದ ಛಾಪು ಮೂಡಿಸಿದೆ. ಎಐಸಿಟಿಇ ಹಾಗೂ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿದ್ದು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದೊಂದಿಗೆ ಸಂಯೋಜನೆಗೊಂಡಿದೆ. ಜತೆಗೆ ಎಲ್ಲ ಕೋರ್ಸ್‌ಗಳಿಗೆ ಎನ್‌ಬಿಎ ಮತ್ತು ಸಂಸ್ಥೆಗೆ ಎನ್‌ಎಎಸಿ ಮಾನ್ಯತೆ ಲಭಿಸಿದೆ.


ಮಹಾರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್, ಇನ್‌ಫರ್ಮೇಷನ್ ಸೈನ್ ಮತ್ತು ಇಂಜಿನಿಯರಿಂಗ್, ಕಂಪ್ಯೂಟರ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಮತ್ತು ಬಿಜಿನೆಸ್ ಸಿಸ್ಟಮ್ಸ್, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್(ಆರ್ಟಿಫಿಶಿಯಲ್ ಇಂಟೆಲಿಜೆನ್ಸ್), ಕಂಪ್ಯೂಟರ್ ಸೈಸ್ ಮತ್ತು ಇಂಜಿನಿಯರಿಂಗ್ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಷಿನ್ ಲರ್ನಿಂಗ್), ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ (ಡೆಟಾ ಸೈನ್ಸ್), ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್(ಐಟಿಟಿ ಮತ್ತು ಸೈಬರ್ ಸೆಕ್ಯೂರಿಟಿ ಮತ್ತು ಬ್ಲಾಕ್ಸ್‌ಚೈನ್ ಟೆಕ್ನಾಲಜಿ) ಕೋರ್ಸುಗಳು ಲಭ್ಯವಿದೆ. ಬಿಇ, ಎಂಬಿಎ, ಎಂಸಿಎ ಮತ್ತು ಎಂ.ಟೆಕ್ ಪ್ರವೇಶಕ್ಕೆ ದಾಖಲಾತಿ ಪ್ರಾರಂಭವಾಗಿದೆ.


ಪಿಎಚ್.ಡಿ. ಪದವೀಧರರು ಸೇರಿ ಸ್ಥಾಪಿಸಿರುವ ಭಾರತದ ಮೊದಲ ತಾಂತ್ರಿಕ ಶಿಕ್ಷಣ ಕೇಂದ್ರ ಇದಾಗಿದ್ದು, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕಾಲೇಜಿನ ಆವರಣದಲ್ಲೇ ಪ್ರತ್ಯೇಕ ಹಾಗೂ ಸುರಕ್ಷಿತ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿದೆ. ಆರೋಗ್ಯಕರ ಅಡುಗೆ, ವೈ-ಫೈ, ಕ್ರೀಡಾಂಗಣ ಹಾಗೂ ಜಿಮ್ ಸೌಲಭ್ಯ ಕಲ್ಪಿಸಲಾಗಿದೆ. ಕಾಲೇಜಿಗೆ ಸುರಕ್ಷಿತ ಬಸ್ ಸಂಚಾರದ ವ್ಯವಸ್ಥೆಯಿದ್ದು, ಮದ್ದೂರು, ಮಂಡ್ಯ, ಚಾಮರಾಜನಗರ, ಪಾಂಡವಪುರ, ಮಳವಳ್ಳಿ, ಬನ್ನೂರು, ಕೆಆರ್‌ಎಸ್, ಕೆ.ಆರ್.ನಗರ, ಕೆ.ಆರ್.ಪೇಟೆ, ಹುಣಸೂರು, ನಂಜನಗೂಡು, ಕೊಳ್ಳೇಗಾಲ, ಎಚ್.ಡಿ.ಕೋಟೆ, ತಿ.ನರಸೀಪುರ ಹಾಗೂ ಮೈಸೂರು ಭಾಗಗಳಿಂದ ಬಸ್ ಸೌಲಭ್ಯವಿದೆ.


ನಮ್ಮ ಸಂಸ್ಥೆಯಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಕೇವಲ ಬೋಧನೆಗಷ್ಟೆ ಸೀಮಿತವಾಗದೆ, ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸಂಸ್ಥೆ ಬದ್ಧತೆ ಹೊಂದಿದೆ. ನಮ್ಮಲ್ಲಿ ಉತ್ತಮ ಪ್ಲೇಸ್‌ಮೆಂಟ್ ಸೌಲಭ್ಯವಿದ್ದು, 2018-19ನೇ ಸಾಲಿನಲ್ಲಿ 357 ವಿದ್ಯಾರ್ಥಿಗಳು, 2019-20ನೇ ಸಾಲಿನಲ್ಲಿ 382, 2020-21ನೇ ಸಾಲಿನಲ್ಲಿ 416, 2021-22ನೇ ಸಾಲಿನಲ್ಲಿ 496 ವಿದ್ಯಾರ್ಥಿಗಳಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗ ದೊರಕಿದೆ.
> ಎ.ಎಂ.ಅನಿರುದ್ಧ, ಆಡಳಿತ ಅಧಿಕಾರಿ, ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net