

ಮದ್ದೂರು: ಕಳೆದ 18 ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಗೆ ಮದ್ದೂರು ಪ್ರಥಮ ಹಾಗೂ ರಾಜ್ಯಕ್ಕೆ 2ನೇ ಸ್ಥಾನ ಬರುತ್ತಿರುವುದು ಹೆಮ್ಮೆಯ ವಿಷಯವೆಂದು ಎಂದು ಶಾಸಕ ಡಿ.ಸಿ.ತಮ್ಮಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ರಾಂಪುರ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಾಲಕರು ಸರ್ಕಾರಿ ಶಾಲೆಗಳನ್ನು ಲಘುವಾಗಿ ಕಾಣಬಾರದು. ಖಾಸಗಿ ಶಾಲೆಗಳ ವ್ಯಾಮೋಹ ಬಿಡಬೇಕು ಎಂದು ಹೇಳಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಗ್ರಾಪಂ ಉಪಾಧ್ಯಕ್ಷೆ ಶಾಂತಮ್ಮ, ಸದಸ್ಯರಾದ ವೆಂಕಟೇಶ್, ದಯಾನಂದ್, ಎಂಪಿಸಿಎಸ್ ಅಧ್ಯಕ್ಷೆ ವಿಶಾಲ ಕೃಷ್ಣ, ಮುಖಂಡರಾದ ಮಾದನಾಯಕನಹಳ್ಳಿ ರಾಜಣ್ಣ, ಆರ್.ಜಿ. ಮನು, ನವೀನ್, ಕಾಳಪ್ಪ, ನಂದೀಶ್, ಸಂದೀಪ್, ಮಧು, ಶಂಕರೇಗೌಡ, ಚೊಟ್ಟನಹಳ್ಳಿ ಇಂದುಶೇಖರ್, ಕೋಣಸಾಲೆ ಮಧು ಇತರರಿದ್ದರು.