ಶಿಕ್ಷಣ, ಕಾಮಗಾರಿ ಗುಣಟ್ಟ ಇರಲಿ

1905klb20
Published on

ಕಲಬುರಗಿ: ಸರ‍್ಕಾರಿ ಶಾಲೆಗಳ ಕಟ್ಟಡಗಳ ನರ‍್ಮಾಣ ಕಾಮಗಾರಿ ಗುಣಮಟ್ಟ ಕಾಪಾಡಬೇಕು. ವಿಶೇಷವಾಗಿ ಬಡವರ ಮಕ್ಕಳು ಅಧ್ಯಯನಕ್ಕೆ ಬರುವ ಶಾಲೆಗಳಲ್ಲಿ ಶಿಕ್ಷಣದ ಉತ್ಕ್ರಷ್ಟತೆ ಕಾಪಾಡಬೇಕು ಎಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು.

ಇಟಗಾ ಗ್ರಾಮದಲ್ಲಿ ರ‍್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರ್​ಎಂಎಸ್​ಎ ಯೋಜನೆ ಅಡಿ ೧.೨೯ ಕೋಟಿ ರೂ. ವೆಚ್ಚದ ನೂತನ ಕಟ್ಟಡ ಕಾಮಗಾರಿಗೆ ಸೋಮವಾರ ಅಡಿಗಲ್ಲು ನೆರವೇರಿಸಿ ಮಾತನಾಡಿ, ಸಮಗ್ರ ಪ್ರಗತಿಗೆ ಶಿಕ್ಷಣವೇ ಅಡಿಗಲ್ಲು ಆಗಿದೆ. ರ‍್ಕಾರಿ ಶಾಲೆಗಳೇ ನಮ್ಮ ಶಕ್ತಿಯಾಗಿದ್ದು, ಕಾಮಗಾರಿ, ಬೋಧನೆಯಲ್ಲಿ ಯಾವುದೇ ಕಾರಣಕ್ಕೂ ರಾಜಿ ಆಗಲ್ಲ. ಗುಣಮಟ್ಟ ಕಡ್ಡಾಯ ಇರಬೇಕು ಎಂದು ಸೂಚನೆ ನೀಡಿದರು.

ಶಾಲೆ ನರ‍್ಮಾಣಕ್ಕೆ ಜಮೀನು ನೀಡಿದ ನಿಜಾಮೊದ್ದಿನ ಪಟೇಲ್​ ಅವರನ್ನು ಸನ್ಮಾನಿಸಲಾಯಿತು. ಬಿಇಓ ಸೋಮಶೇಖರ ಹಂಚಿನಾಳ, ಭೂಪಾಲ ತೆಗನೂರ ಗ್ರಾಪಂ ಅಧ್ಯಕ್ಷ ಮುತ್ತುರಾಜ ಶೆಳ್ಳಗಿ, ಪ್ರಮುಖರಾದ ದೇವು ಜಮಾದಾರ, ಎಇಇ ಶರಣಪ್ಪ ಹಿರೇಮಠ, ವಿನೋದ ಪಾಟೀಲ್​, ವಿಶ್ವನಾಥ ಪಾಟೀಲ್​ ವೆಂಕಟಬೆನ್ನೂರ, ರೇವಣ್ಣಸಿದ್ದಪ್ಪ ಹರಸೂರ, ಚನ್ನವಿರಯ್ಯ ಹಿರೇಮಠ, ಚನ್ನಬಸಪ್ಪ ದೇಸಾಯಿ, ಕಾಶಿನಾಥ ದೇವಟಗಿ, ಶಿವಪುತ್ರಪ್ಪ ಇಟಗಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net